ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವರದಿ ಮಾಡದಿರುವುದು ಗಂಭೀರ ಅಪರಾಧ: ಸುಪ್ರೀಂ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವರದಿ ಮಾಡದಿರುವುದು ಗಂಭೀರ ಅಪರಾಧ: ಸುಪ್ರೀಂ

ವದೆಹಲಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಮಾಹಿತಿ ಇದ್ದಾಗ್ಯೂ, ಅದನ್ನು ವರದಿ ಮಾಡದೇ ಇರುವುದು ಗಂಭೀರ ಅಪರಾಧವಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಬುಧವಾರ ಹೇಳಿದೆ.

ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಹಾಗೂ ಸಿ.ಟಿ.ರವಿಕುಮಾರ್‌ ಅವರಿದ್ದ ನ್ಯಾಯಪೀಠ, 'ಇಂಥ ಪ್ರಕರಣಗಳನ್ನು ವರದಿ ಮಾಡದಿರುವುದು ತಪ್ಪಿತಸ್ಥರು ಎಸಗಿರುವ ಅಪರಾಧವನ್ನು ಮರೆಮಾಚುವ ಪ್ರಯತ್ನವಾಗುತ್ತದೆ' ಎಂದು ಕಟುವಾಗಿ ಹೇಳಿದೆ.

2019ರಲ್ಲಿ ಮಹಾರಾಷ್ಟ್ರದ ಶಾಲೆಯೊಂದರ 17 ಬುಡಕಟ್ಟು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದ ಬಗ್ಗೆ ವರದಿ ನೀಡುವಲ್ಲಿ ವೈದ್ಯರೊಬ್ಬರು ವಿಫಲರಾಗಿದ್ದರು. ಅವರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದು ಮಾಡಿ ಬಾಂಬೆ ಹೈಕೋರ್ಟ್‌ ಆದೇಶಿಸಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.