ಮಂಡ್ಯ : ಪಾದಯಾತ್ರೆಯಲ್ಲಿ ತಾಯಿಯ ಶ್ಯೂ ಲೇಸ್ ಸರಿಪಡಿಸಿದ ರಾಹುಲ್ ಗಾಂಧಿ

ಮಂಡ್ಯ : ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಲಾಗುತ್ತಿರುವ ಭಾರತ್ ಜೋಡೊ ಪಾದಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಶ್ಯೂ ಲೇಸ್ ಬಿಚ್ಚಿದ್ದು ತಕ್ಷಣವೇ ರಾಹುಲ್ ಗಾಂಧಿಯವರು ತಾಯಿಯ ಶ್ಯೂ ಲೇಸ್ ಸರಿಪಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಂದು ಬೆಳಿಗ್ಗೆ ಪಾದಯಾತ್ರೆಯಲ್ಲಿ 12 ನಿಮಿಷಗಳ ಕಾಲ ಸೋನಿಯಾ ಗಾಂಧಿಯವರು ಹೆಜ್ಜೆ ಹಾಕಿ ಸುಮಾರು ಮುಕ್ಕಾಲು ನಿಮಿಷ ನಡೆದು ರಾಹುಲ್ ಗಾಂಧಿ ಅವರಿಗೆ ಬೆಂಬಲವಾಗಿ ನಿಂತರು. ಪಾದಯಾತ್ರೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಲ್ಲದೆ, ಬೆಳಿಗ್ಗೆಯಿಂದಲೇ ಹಲವಾರು ಜನ ಬಂದು ಪಾದಯಾತ್ರೆಯಲ್ಲಿ ಸೇರಿಕೊಂಡರು. ನಾಗಮಂಗಲ ವಿಧಾನಸಭಾ ಕ್ಷೇತ್ರವನ್ನು ಪ್ರವೇಶ ಮಾಡುತ್ತಿದ್ದಂತೆ 20,000ಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಮಂಡ್ಯದ ಮಾಜಿ ಸಚಿವ ಚೆಲುವನಾರಾಯಣ ಸ್ವಾಮಿ ನೇತೃತ್ವದಲ್ಲಿ ಹಲವು ಮುಖಂಡರು ಭಾಗವಹಿಸುತ್ತಿದ್ದಾರೆ.