ಸಚಿವರಿಂದ ಅಂಬ್ಯುಲೆನ್ಸ್ ವಾಹನಗಳು ಸೇವೆಗೆ ಹಸ್ತಾಂತರ | Hirekerur |
ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಮಹಿಂದ್ರಾ ಕಂಪನಿಯವರು ಉಚಿತವಾಗಿ ನೀಡಿದ ಮೂರು ಅಂಬ್ಯುಲೆನ್ಸ್ ವಾಹನಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಕೃಷಿ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ರೋಗಿಗಳ ಸೇವೆಗೆ ಹಸ್ತಾಂತರಿಸಿದರು. ರಾಜ್ಯ ಉಗ್ರಾಣ ನಿಗಮ ಮಂಡಳಿ ಅಧ್ಯಕ್ಷ ಯು.ಬಿ.ಬಣಕಾರ, ಪಪಂ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ಪಪಂ ಸದಸ್ಯ ಮಹೆಂದ್ರ ಬಡಳ್ಳಿ, ತಾಲೂಕು ಆರೋಗ್ಯಾಧಿಕಾರಿ ಡಾ.ಜಡ್.ಆರ್.ಮಕಾಂದಾರ, ವೈದ್ಯಾಧಿಕಾರಿ ಡಾ.ಹೊನ್ನಪ್ಪ ಜೆ.ಎಂ.ಮತ್ತಿತರರು ಇದ್ದರು