ರಾಜ್ಯದಲ್ಲಿಂದು ಕೊರೋನಾ ಹೊಸ ದಾಖಲೆ; ಬರೋಬ್ಬರಿ 2 ಲಕ್ಷ ಟೆಸ್ಟ್, 8 ಸಾವಿರ ಗಡಿ ದಾಟಿದ ಹೊಸ ಕೇಸ್

ರಾಜ್ಯದಲ್ಲಿಂದು ಕೊರೋನಾ ಹೊಸ ದಾಖಲೆ; ಬರೋಬ್ಬರಿ 2 ಲಕ್ಷ ಟೆಸ್ಟ್, 8 ಸಾವಿರ ಗಡಿ ದಾಟಿದ ಹೊಸ ಕೇಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಮಹಾಸ್ಪೋಟವಾಗಿದೆ. ಇವತ್ತು ಒಂದೇ ದಿನ 2 ಲಕ್ಷಕ್ಕೂ ಅಧಿಕ ಟೆಸ್ಟ್ ಮಾಡಲಾಗಿದ್ದು, 8 ಸಾವಿರಕ್ಕೂ ಅಧಿಕ ಹೊಸ ಕೇಸ್ ಪತ್ತೆಯಾಗಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ 8449 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣ 8 ಸಾವಿರದ ಗಡಿ ದಾಟಿದೆ. ಇವತ್ತು 2,03,260 ಪರೀಕ್ಷೆ ನಡೆಸಲಾಗಿದೆ.

ಪಾಸಿಟಿವಿಟಿ ದರ ಶೇಕಡ 4.15 ರಷ್ಟು ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ. ಹೊಸದಾಗಿ 107 ಜನರಿಗೆ ಒಮಿಕ್ರಾನ್ ಸೋಂಕು ತಗುಲಿರುವ ವರದಿ ಬಂದಿದ್ದು, ಒಟ್ಟು ಸಂಖ್ಯೆ 333 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 6812 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ.