ಮಂಡ್ಯ' ಗೆಲ್ಲಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ : ಕದಲೂರು ಉದಯ್ ಜೊತೆ 'ಕೈ' ನಾಯಕರ ಗೌಪ್ಯ ಮಾತುಕತೆ
ಮಂಡ್ಯ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳ ಕಸರತ್ತು ಆರಂಭಿಸಿದೆ. ಇನ್ನೂ, ಕಾಂಗ್ರೆಸ್ ಪಾಳಯದಲ್ಲಿ ಏಳು ಕ್ಷೇತ್ರಗಳಲ್ಲೂ ಪ್ರಬಲ ಅಭ್ಯರ್ಥಿ ಹಾಕಲು ಕಾಂಗ್ರೆಸ್ ಸ್ಟಾಟರ್ಜಿ ಮಾಡುತ್ತಿದೆ.
ಹೌದು, ಮದ್ದೂರಿಗೆ ಹೊಸ ಅಭ್ಯರ್ಥಿ ಹಾಕಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಇಷ್ಟು ದಿನ ಗುರುಚರಣ್ ಅಭ್ಯರ್ಥಿ ಎನ್ನುತ್ತಿದ್ದ ಕಾಂಗ್ರೆಸ್ ಇದೀಗ ಮದ್ದೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ನಮ್ಮ ಟಿಕೆಟ್ ಮಾರಾಟಕ್ಕೆ ಇಲ್ಲ ಎಂದಿದ್ದ ಡಿಕೆಶಿ ಇದೀಗ ಕದಲೂರು ಉದಯ್ ಜೊತೆ ಕಾಂಗ್ರೆಸ್ ನಾಯಕರ ಗೌಪ್ಯ ಮಾತುಕತೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಕಾರ್ಯಾಧ್ಯಕ್ಷ ಧೃವನಾರಯಣ್, ಉಸ್ತುವಾರಿ ರೋಸಿ ಜಾನ್ ಸೇರಿ ಹಲವರು ಮಾತುಕತೆ ನಡೆಸಿದ್ದಾರೆ. ಉದಯ್ ಮದ್ದೂರು ಕಾಂಗ್ರೆಸ್ ಅಭ್ಯರ್ಥಿ ಎಂದು ಈ ಹಿಂದೆ ಚರ್ಚೆ ನಡೆದಿತ್ತು. ಚರ್ಚೆಯನ್ನು ತಳ್ಳಿಯಾಕಿ ಕಾಂಗ್ರೆಸ್ ಟಿಕೆಟ್ ಮಾರಾಟಕ್ಕೆ ಇಲ್ಲ ಎಂದು ಡಿಕೆಶಿ ಹೇಳಿದ್ದರು. ಇದೀಗ ಉದಯ್ ಜೊತೆ ಗೌಪ್ಯ ಮಾತುಕತೆ ನಡೆಸಿರುವ ಕಾಂಗ್ರೆಸ್ ನಾಯಕರು. ಉದಯ್ರನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡು ಅಭ್ಯರ್ಥಿ ಮಾಡಲು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ಧೂರು ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ಇವೆಲ್ಲಾ ಆಟ ಬಿಟ್ಟು ಬಿಡಿ, ಮೊದಲು ಪಕ್ಷದ ಕೆಲಸ ಮಾಡಿ ಎಂಬುದಾಗಿ ಖಡಕ್ ವಾರ್ನಿಗ್ ನೀಡಿದ್ದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ನಡೆಯಿತು. ಇಂದು ನಡೆದಂತ ಕಾರ್ಯಕ್ರಮದಲ್ಲಿ ಮದ್ದೂರು ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದಾಗಿ ಘೋಷಿಸುವಂತೆ ಘೋಷಣೆ ಕೂಗಿದ್ದರು. ಪ್ರಜಾಧ್ವನಿ ಯಾತ್ರೆಯಲ್ಲಿಯೇ ಮದ್ದೂರು ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದಾಗಿ ಘೋಷಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿ, ಗದ್ದಲ ಏಳಿಸಿದರು. ಅಲ್ಲದೇ ದಯಮಾಡಿ ಅಭ್ಯರ್ಥಿ ಗೊಂದಲಕ್ಕೆ ತೆರೆ ಎಳೆಯಿರಿ ಎಂದು ಕೇಳಿದರು.ಈ ವೇಳೆ ಮೈಕ್ ಮುಂದೆ ಬಂದಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಇವೆಲ್ಲಾ ಆಟ ಬಿಟ್ಟು ಬಿಡಿ, ಮೊದಲು ಪಕ್ಷದ ಕೆಲಸ ಮಾಡಿ. ನಾನೇ ಅಭ್ಯರ್ಥಿ ಎಂಬುದಾಗಿ ಹೇಳುವ ಮೂಲಕ ಸಖತ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿತ್ತು.