ಭಾಸ್ಕರ್ ರಾವ್ ವಿಆರ್‌ಎಸ್‌ಗೆ ಬ್ರೇಕ್

ಬೆಂಗಳೂರು,ನ.12- ಸ್ವಯಂ ನಿವೃತ್ತಿ ಪಡೆದು ರಾಜಕೀಯ ಸೇರಲು ಮುಂದಾಗಿದ್ದ ರೈಲ್ವೆ ಇಲಾಖೆಯ ಎಡಿಜಿಪಿ ಭಾಸ್ಕರ್ ರಾವ್ ಆಸೆಗೆ ರಾಜ್ಯ ಸರ್ಕಾರ ತಣ್ಣೀರೆರಚಿದೆ. ಸ್ವಯಂ ನಿವೃತ್ತಿಗೆ ಭಾಸ್ಕರ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ.ಎಸ್.ರವಿಕುಮಾರ್ ತಡೆ ಹಿಡಿದಿದ್ದಾರೆ.
ತಡೆ ಹಿಡಿಯಲು ಕಾರಣವೇನೆಂಬುದು ತಿಳಿದುಬಂದಿಲ್ಲವಾದರೂ ಮುಖ್ಯ ಕಾರ್ಯದರ್ಶಿಗಳ ಈ ನಿರ್ಧಾರ ರಾಜಕೀಯ ವಲಯದಲ್ಲಿ ಸಂಶಯಗಳಿಗೆ ಎಡೆಮಾಟಿಕೊಟ್ಟಿದೆ. ಪ್ರಸ್ತುತ ರೈಲ್ವೆ ಇಲಾಖೆಯ ಎಡಿಜಿಪಿಯಾಗಿರುವ ಅವರು ಕೆಲ ದಿನಗಳ ಹಿಂದೆ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು.
ಮೂಲಗಳ ಪ್ರಕಾರ 2023ರ ವಿಧಾನಸಭೆ ಚುನಾವಣೆಗೆ ಸ್ರ್ಪಸಲು ರಾಷ್ಟ್ರೀಯ ಪಕ್ಷವೊಂದನ್ನು ಸೇರಲು ಚಿಂತನೆ ನಡೆಸಿದ್ದರು ಎಂದು ತಿಳಿದುಬಂದಿದೆ. ಈಗಾಗಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರೂ ಈಗ ಮುಖ್ಯ ಕಾರ್ಯದರ್ಶಿಗಳು ತಡೆ ಹಿಡಿದಿದ್ದಾರೆ.