ನಮ್ಮದೇ ನೆಲದಲ್ಲಿ ಮತಾಂಧತೆಯ ಕ್ರೌರ್ಯ; ಓಲೈಕೆ ರಾಜಕಾರಣದ ಪ್ರಭಾವವಿದು; ಟೈಲರ್ ಹತ್ಯೆಗೆ ಕಿಡಿ ಕಾರಿರ ಸಿ.ಟಿ. ರವಿ

ನಮ್ಮದೇ ನೆಲದಲ್ಲಿ ಮತಾಂಧತೆಯ ಕ್ರೌರ್ಯ; ಓಲೈಕೆ ರಾಜಕಾರಣದ ಪ್ರಭಾವವಿದು; ಟೈಲರ್ ಹತ್ಯೆಗೆ ಕಿಡಿ ಕಾರಿರ ಸಿ.ಟಿ. ರವಿ

ನವದೆಹಲಿ: ಉದಯಪುರದಲ್ಲಿ ಟೈಲರ್ ಹತ್ಯೆ ಪ್ರಕರಣ ಮಾನವೀಯತೆಯ ವಿರುದ್ಧದ ಮಾನಸಿಕತೆಯಾಗಿದೆ. ನಮ್ಮದೇ ನೆಲದಲ್ಲಿ ಮತಾಂಧತೆಯ ಕ್ರೌರ್ಯ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.

ರವಿ, ಪ್ರಚೋದನೆ ಕೊಡುವ ಮೂಲ ಹುಡುಕಬೇಕಿದೆ. ಪ್ರಚೋದನೆಯ ಕೆಟ್ಟ ಅಂಶ, ಜಾಲವನ್ನು ಬೇರು ಸಮೇತ ಕಿತ್ತುಹಾಕಬೇಕಿದೆ. ರಾಜಸ್ಥಾನದಲ್ಲಿ ಓಲೈಕೆ ರಾಜಕಾರಣ ನಿಲ್ಲಬೇಕು ಓಲೈಕೆ ರಾಜಕಾರಣದ ಪ್ರಭಾವವೇ ದೇಶ ಇಬ್ಬಾಗವಾಯಿತು. ಇದು ಮಾನವೀಯತೆ ವಿರುದ್ಧದ ಮಾನಸಿಕತೆ ಎಂದು ವಾಗ್ದಾಳಿ ನಡೆಸಿದರು. ಸ್ಟೇಟಸ್ ಹಾಕಿದ್ದೇ ತಪ್ಪಾ? ನಿತ್ಯ ದೇವರ ಅಪಮಾನ ಮಾಡಲಾಗುತ್ತಿದೆ. ಸ್ವಧರ್ಮ ಪ್ರೀತಿಸಬೇಕು, ಪರಧರ್ಮ ಗೌರವಿಸಬೇಕು. ಮುಸ್ಲಿಂ ಮೂಲಭೂತವಾದಿಗಳು ಇಂತಹ ಕೃತ್ಯ ನಡೆಸಿರುವುದು ಖಂಡನೀಯ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದರು.