ಪಾಠ ಮಾಡಬೇಕಿದ್ದ ಗುರುಗಳೇ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ.! ಶಿಕ್ಷಕ ಸಸ್ಪೆಂಡ್‌

ಪಾಠ ಮಾಡಬೇಕಿದ್ದ ಗುರುಗಳೇ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ.! ಶಿಕ್ಷಕ ಸಸ್ಪೆಂಡ್‌

ತುಮಕೂರು: ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರೇ ಇತ್ತೀಚೆಗೆ ಅಡ್ಡದಾರಿ ಹಿಡಿದಿದ್ದಾರೆ. ಇದೀಗ ಮತ್ತೊಂದು ಪ್ರಕರಣ ಬಯಲಿಗ ಬಂದಿದೆ. ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಿದ್ದಾರೆ.

ಡಿಡಿಪಿಐ ಕೆ.ಜಿ.ರಂಗಯ್ಯ ಆದೇಶ ಹೊರಡಿಸಿದ್ದಾರೆ. ಕೊಟಗಾರಲಹಳ್ಳಿ ಸರ್ಕಾರಿ ಪ್ರೌಢಶಾಲೆ ಪಿ.ನಾಗಭೂಷಣ್ ಅಮಾನತುಗೊಂಡ ಶಿಕ್ಷಕ.
ಮಧುಗಿರಿ ತಾಲೂಕಿನ ಕೊಟಗಾರಲಹಳ್ಳಿ ಪ್ರೌಢಶಾಲೆಯ ಶಿಕ್ಷಕ ಪಿ.ನಾಗಭೂಷಣ್ ಪರೀಕ್ಷೆಯಲ್ಲಿ ಕಡಿಮೆ‌ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಉತ್ತರ ಬರೆದುಕೊಟ್ಟು ಹೆಚ್ಚು ಅಂಕ ನೀಡುತ್ತಿದ್ದರು.

ಈ ಸಂಬಂಧ ಕಾರಣ ಕೇಳಿ ಶಿಕ್ಷಕ ಪಿ.ನಾಗಭೂಷಣ್​ಗೆ, ಮುಖ್ಯ ಶಿಕ್ಷಕರು ನೋಟಿಸ್ ನೀಡಿದ್ದರು. ಈ ವೇಳೆ ತಪ್ಪನ್ನು ತಿದ್ದಿಕೊಳ್ಳುವೆ ಎಂದು ಪತ್ರ ಬರೆದುಕೊಟ್ಟಿದ್ದಾನೆ.ಈಗ ಶಿಕ್ಷಕ ಪಿ.ನಾಗಭೂಷಣ್ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪ ಕೇಳಿ ಬಂದಿದೆ. ಹೀಗಾಗಿ ಶಿಕ್ಷಕರಿಂದ ವರ್ತನೆಯಿಂದ ವಿದ್ಯಾರ್ಥಿಗಳ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.