ಭಾರತ ರತ್ನ ನೀಡದೆ ಮುಲಾಯಂ ಅವರ ಅಪಹಾಸ್ಯ: ಸ್ವಾಮಿ ಪ್ರಸಾದ್ ಮೌರ್ಯ

ಲಖನೌ: 'ಮುಲಾಯಂ ಸಿಂಗ್ ಯಾದವ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ನೀಡುವುದರ ಮೂಲಕ ಕೇಂದ್ರ ಸರ್ಕಾರ ಅವಮಾನ ಮಾಡಿದೆ. ಅವರ ವ್ಯಕ್ತಿತ್ವ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಅವರಿಗೆ ಭಾರತ ರತ್ನ ನೀಡಬೇಕಿತ್ತು' ಎಂದು ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಅವರು ಗುರುವಾರ ಹೇಳಿದ್ದಾರೆ.
'ಮುಲಾಯಂ ಸಿಂಗ್ ಅವರಿಗೆ ಪದ್ಮವಿಭೂಷಣ ನೀಡಿ, ಅವರನ್ನು ಅಪಹಾಸ್ಯ ಮಾಡಲಾಗಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸಮಾಜವಾದಿ ಪಕ್ಷದ ವಕ್ತಾರ ಐ.ಪಿ. ಸಿಂಗ್ ಟ್ವೀಟ್ ಮಾಡಿ, 'ಭಾರತ ರತ್ನ ಬಿಟ್ಟು ಬೇರೆಯಾವ ಪ್ರಶಸ್ತಿಯೂ ಮಣ್ಣಿನ ಮಗ ಮುಲಾಯಂ ಸಿಂಗ್ ಅವರಿಗೆ ಸರಿಹೊಂದುವುದಿಲ್ಲ. ಮುಲಾಯಂ ಸಿಂಗ್ ಅವರಿಗೆ ಭಾರತ ರತ್ನ ನೀಡುವ ಕುರಿತು ತಕ್ಷವೇ ಘೋಷಣೆ ಮಾಡಬೇಕು' ಎಂದರು.