ಪುಲ್ವಾಮ ದಾಳಿಯನ್ನು ಸಮರ್ಥಿಸಿ ಪೋಸ್ಟ್ ಹಾಕಿದ್ದ ಯುವಕನಿಗೆ ಶಿಕ್ಷೆ ; 5 ವರ್ಷ ಜೈಲು, ದಂಡ
ಬೆಂಗಳೂರು: ಭಯೋತ್ಪಾದಕರು ನಡೆಸಿದ ಪುಲ್ವಾಮ ದಾಳಿಯನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ಆರೋಪಿಗೆ ಐದು ವರ್ಷ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
2019 ರಲ್ಲಿ ಪುಲ್ವಾಮ ದಾಳಿ ಭಯೋತ್ಪಾದಕ ಕೃತ್ಯವನ್ನ ಸರ್ಮಥಿಸಿ ನಗರದ ಕಚರಕನಹಳ್ಳಿಯ ಎಂಜಿನಿಯರಿಂಗ್ ವಿದ್ಯಾರ್ಥಿ ಪೈಜ್ ರಶೀದ್ ಪೋಸ್ಟ್ ಮಾಡಿದ್ದನು.
ಈ ಅಪರಾಧಿಯ ಮೊಬೈಲ್ ಫೋನ್ ಅನ್ನು ಸೀಜ್ ಮಾಡಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ವಿಚಾರಣೆ ನಡೆಸಿದ್ದರು. ಇದೀಗ ಆತ 5 ವರ್ಷ ಜೈಲಲ್ಲಿ ಕಂಬಿ ಎಣಿಸಬೇಕಾಗಿದೆ. 2019ರ ಫೆಬ್ರವರಿಯಲ್ಲಿ ಬಂಧನಕ್ಕೊಳಗಾದ ಅಪರಾಧಿಯ ಜಾಮೀನು ಅರ್ಜಿ ಕೋರ್ಟ್ ನಿರಾಕರಿಸಿತ್ತು. ಹಾಗಾಗಿ ಆತ ಇಷ್ಟು ದಿನ ಆತನನ್ನು ಜೈಲಿನಲ್ಲಿಯೇ ಇರಿಸಲಾಗಿತ್ತು. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೇ ಸಾಕ್ಷಿ ನೀಡಿದ್ದರುಹಾಗೂ ತಾಂತ್ರಿಕ ಸಾಕ್ಷಿಗಳನ್ನು ಕೋರ್ಟಿಗೆ ಒದಗಿಸಿದ್ದರು. ಇದೀಗ ಆತನಿಗೆ ಶಿಕ್ಷೆ ವಿಧಿಸಲಾಗಿದೆ.