ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಿಮ್ಮ ಜೊತೆ ನಾನಿದ್ದೇನೆ : H.D ಕುಮಾರಸ್ವಾಮಿ

ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಿಮ್ಮ ಜೊತೆ ನಾನಿದ್ದೇನೆ : H.D ಕುಮಾರಸ್ವಾಮಿ

ರೈತರು ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು, ಅವರ ಜೊತೆ ಯಾವಾಗಲೂ ನಾನಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ರೈತರ ಸಾಲಮನ್ನಾಕ್ಕೆ ಕಾಂಗ್ರೆಸ್ ಒಪ್ಪಿರಲಿಲ್ಲ , ಆದರೂ ಪಟ್ಟುಬಿಡದೆ ಸಾಲ ಮನ್ನಾ ಮಾಡಿದ್ದೇನೆ.

ರೈತರು ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದರು.

ಪ್ರತಿ ಕುಟುಂಬ ಸಂಕಷ್ಟದಿಂದ ಪಾರಾಗಲು ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಸುಮಾರು ಒಂದು ಸಾವಿರ ಅಂಗವಿಕಲರ ಕೆಲಸ ಖಾಯಂ ಮಾಡಿದ್ದೇನೆ ಎಂದು ಹೇಳಿದರು. ಘೋಷಣೆ ಮಾಡಿದ ಸಾಲವನ್ನು ಬಿಜೆಪಿ ಇನ್ನೂ ಕೂಡಾ ಎರಡು ಲಕ್ಷ ಜನ ರೈತರಿಗೆ ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.