ತೆರಿಗೆ ಕಡಿತ, ಭತ್ಯೆ, ಟಿವಿ ಇಂಡಸ್ಟ್ರಿ ನಿರೀಕ್ಷೆಗಳು ಹೀಗಿದೆ

ತೆರಿಗೆ ಕಡಿತ, ಭತ್ಯೆ, ಟಿವಿ ಇಂಡಸ್ಟ್ರಿ ನಿರೀಕ್ಷೆಗಳು ಹೀಗಿದೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ರ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1, 2023ರಂದು ಮಂಡನೆ ಮಾಡಲಿದ್ದಾರೆ. ಮುಂದಿನ ವರ್ಷ ಅಂದರೆ 2024ರಲ್ಲಿ ಲೋಕಸಭೆ ಚುನಾವಣೆ ಬರಲಿರುವ ಕಾರಣ ಈ ಬಜೆಟ್ ಕೇಂದ್ರ ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಆಗಿದೆ.

ಚುನಾವಣೆಗೂ ಮುನ್ನ ಬರುವ ಬಜೆಟ್ ಆದ್ದರಿಂದ ನಿರೀಕ್ಷೆಗಳು ಹೆಚ್ಚೇ ಇದೆ.

ಈಗಾಗಲೇ ಹಲವಾರು ವಲಯಗಳು ಬಜೆಟ್‌ನ ಮೇಲೆ ತಮ್ಮ ವಲಯದ ನಿರೀಕ್ಷೆಗಳೇನಿದೆ, ಯಾವೆಲ್ಲ ಬೇಡಿಕೆಗಳು ಇದೆ ಎಂದು ತಿಳಿಸಿದೆ. ಪ್ರಮುಖವಾಗಿ ಎಲ್ಲ ವಲಯಕ್ಕೂ ತೆರಿಗೆ ಸ್ಲ್ಯಾಬ್ ಮೇಲೆ ಕಣ್ಣಿದೆ. ಹಿರಿಯ ನಾಗರಿಕರು, ಗೃಹ ಖರೀದಿದಾರರು, ರಿಯಲ್ ಇಂಡಸ್ಟ್ರಿ ತೆರಿಗೆ ಸ್ಲ್ಯಾಬ್‌ನ ಪರಿಷ್ಕರಣೆಗಾಗಿ ಕಾಯುತ್ತಿದೆ. ಈ ನಡುವೆ ಟಿವಿ ಇಂಡಸ್ಟ್ರಿ ಕೂಡಾ ತೆರಿಗೆ ಸಂಬಂಧಿತ ಬೇಡಿಕೆ ಸೇರಿ ಹಲವಾರು ಬೇಡಿಕೆ, ನಿರೀಕ್ಷೆಯನ್ನುಈ ಬಾರಿಯ ಕೇಂದ್ರ ಬಜೆಟ್‌ನ ಮೇಲೆ ಹೊಂದಿದೆ.

ಕೋವಿಡ್ ಸಾಂಕ್ರಾಮಿಕ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟಿನಿಂದಾಗಿ ತತ್ತಿರಿಸಿ ಹೋಗಿರುವ ಟೆಲಿವಿಜನ್ ಇಂಡಸ್ಟ್ರಿ ಅಥವಾ ಟಿವಿ ಇಂಡಸ್ಟ್ರಿಯಲ್ಲಿ ಟಿವಿ ಉತ್ಪಾದಕರು ತಮಗೆ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಸಿಹಿಸುದ್ದಿಯನ್ನು ನೀಡಲಿದೆ ಎಂಬ ನಿರೀಕ್ಷೆ ಹೊಂದಿದ್ದಾರೆ. ತೆರಿಗೆ ಸ್ಲ್ಯಾಬ್ ಕಡಿತ, ಭತ್ಯೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಹೊಂದಿದ್ದಾರೆ. ಈ ಇಂಡಸ್ಟ್ರಿಯ ಬೇಡಿಕೆಯ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....


ತೆರಿಗೆ ಸ್ಲ್ಯಾಬ್ ಪರಿಷ್ಕರಣೆ

ಕಳೆದ ವರ್ಷದಲ್ಲಿ ಆರ್ಥಿಕ ಸ್ಥಿತಿ ಹಾಗೂ ಮಧ್ಯಮ ವರ್ಗದಲ್ಲಿನ ಗ್ರಾಹಕರ ಪ್ರಮಾಣ ಕಡಿಮೆಯಾದ ಕಾರಣದಿಂದಾಗಿ ಟಿವಿ ಇಂಡಸ್ಟ್ರಿ ಮೇಲೆ ಭಾರೀ ಪ್ರಭಾವ ಉಂಟಾಗಿದೆ. ಇಂಡಸ್ಟ್ರಿಯಲ್ಲಿ ಯಾವುದೇ ಬೆಳವಣಿಗೆಯು ಕಂಡುಬಂದಿಲ್ಲ. ಪ್ರಮುಖವಾಗಿ ಜಿಎಸ್‌ಟಿ ಕೂಡಾ ಹೆಚ್ಚಾಗಿರುವುದು ಈ ಉದ್ಯಮಕ್ಕೆ ಏಟು ನೀಡಿದೆ. ಆದ್ದರಿಂದಾಗಿ ಈ ಕೇಂದ್ರ ಬಜೆಟ್‌ನಲ್ಲಿ ಜಿಎಸ್‌ಟಿಯನ್ನು ಪರಿಷ್ಕರಿಸುವ ನಿರೀಕ್ಷೆಯನ್ನು ಉದ್ಯಮವು ಹೊಂದಿದೆ. ಕಳೆದ ವರ್ಷದಂತೆಯೇ ಟಿವಿ ಮೇಲಿನ ಜಿಎಸ್‌ಟಿ ಸ್ಲ್ಯಾಬ್ ಕಡಿಮೆ ಮಾಡಬೇಕು ಎಂಬುವುದು ಇಂಡಸ್ಟ್ರಿಯ ಬೇಡಿಕೆಯಾಗಿದೆ. ಇದರಿಂದಾಗಿ ಟಿವಿ ಜನರ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ, ಮಾರಾಟ ಪ್ರಮಾಣ ಹೆಚ್ಚಾಗಿ ಉದ್ಯಮಕ್ಕೆ ಸಹಾಯವಾಗಲಿದೆ ಎಂಬ ಅಭಿಪ್ರಾಯವಿದೆ.