ಶಿಗ್ಗಾಂವಿಯ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕಲಾ ಸಂಸ್ಥೆ ವತಿಯಿಂದ 12 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

ಶಿಗ್ಗಾಂವಿಯ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕಲಾ ಸಂಸ್ಥೆ ವತಿಯಿಂದ 12 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

ಶಿಗ್ಗಾಂವಿ ನಗರದ ಹಳೇ ಕೋರ್ಟ್ ಸಭಾಂಗಣದಲ್ಲಿ ಲಿಂಗೈಕ್ಯ ಗಾನಯೋಗಿ ಪಂಡಿತ  ಪುಟ್ಟರಾಜ ಕವಿ ಗವಾಯಿಗಳವರ 12 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತರಾದ ಪಕ್ಕಿರೇಶ ಕೊಂಡಾಯಿ ಮಾತನಾಡಿ ನಮ್ಮ ಸಂಸ್ಥೆ ಪ್ರಾರಂಭವಾಗಿ 11 ವರ್ಷ ಕಳೆದರೂ ಅಂದಿನಿಂದ ಇಂದಿನವರೆಗೂ ಶಿಗ್ಗಾಂವಿ ನಗರದಲ್ಲಿ ಒಂದು ಸಾಂಸ್ರ್ಕತಿಕ ಭವನ ನಿರ್ಮಾಣಕ್ಕಾಗಿ ಸರ್ಕಾರ ಹಾಗೂ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಂಡರು ಸರ್ಕಾರ ಸ್ಪಂದಿಸದಿರುವುದು ಬೇಸರದ ಸಂಗತಿ ಎಂದರು.

ಪಿ.ಎಸ್.ಐ. ಮಹದೇವ ಯಲಿಗಾರ ಮಾತನಾಡಿ ಇಂದು ಕಲೆ ಮತ್ತು ಕಲಾವಿದರು ಉಳಿಯಬೇಕೆಂದರೆ ಸಂಘ ಸಂಸ್ಥೆಗಳು ಹಾಗೂ ಸರ್ಕಾರದಿಂದ ಪ್ರೋತ್ಸಾಹ ಅಗತ್ಯ ಎಂದರು.

ಸಂಗನಬಸವ ಮಹಾಸ್ವಾಮಿಜಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಜಯದೇವ ಅಗಡಿ,ಮಲ್ಲಪ್ಪ ರಾಮಗೇರಿ,ಎಸ್.ಎನ್. ಮುಗಳಿ, ಪ್ರಕಾಶ ಹಾದಿಮನಿ, ಮಂಜುನಾಥ ಮನ್ನಣ್ಣವರ, ಹಾಗೂ ಇತರರು ಮಾತನಾಡಿದರು. ಸಂಸ್ಥೆಯ ಗೌರಾವಾಧ್ಯಕ್ಷ ಕೊಟ್ರೇಶ ಮಾಸ್ತರ ಬೆಳಗಲಿ, ಬಸವರಾಜ ಶಿಗ್ಗಾಂವಿ,ಶರೀಫ ಮಾಕಪ್ಪನವರ, ಬಸನಗೌಡ ರಾಮನಗೌಡ್ರ, ರುದ್ರಗೌಡ ಪಾಟೀಲ, ಶಿವಾನಂದ ಹೊಸಮನಿ,ಶೇಖಪ್ಪ ಜೋಳದ, ವೀರುಪಾಕ್ಷಪ್ಪ ಬಗಾಡೆ ಹಾಗೂ ಇತರರು ಇದ್ದರು ನಂತರ ಖ್ಯಾತ ಸಂಗೀತ ಕಲಾವಿದರು ಹಾಗೂ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು.