ಬೈಕ್ ಅಪಘಾತ: ಇಬ್ಬರು ಯುವಕರು ದಾರುಣ ಸಾವು

ಹುಬ್ಬಳ್ಳಿ: ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಹಳೇ ಪಿ.ಬಿ. ರಸ್ತೆಯ ಪ್ರೆಸಿಡೆಂಟ್ ಹೋಟೆಲ್ ಬಳಿ ಬುಧವಾರ ರಾತ್ರಿ ನಡೆದಿದೆ.
ನಗರದ ಕೆ.ಎಚ್.ಬಿ ಕಾಲೊನಿಯ ನವೀನ ಗೊಲ್ಲರ (22) ಹಾಗೂ ಹಾವೇರಿಯ ಗಿರೀಶ ಕಬ್ಬಿಣಕಂತಿಮಠ(27 ) ಮೃತರು.
ಧಾರವಾಡ ಕಡೆಯಿಂದ ಹುಬ್ಬಳ್ಳಿಗೆ ಬರುವಾಗ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ನಡೆಸಿ, ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.