ವಿನೂತನ ಪ್ರಧಾನಿ ಹುಟ್ಟು ಹಬ್ಬವನ್ನು ಆಚರಿಸಿದ ಶರಣು ಅಂಗಡಿ

ಧಾರವಾಡ: ಸ್ವಯಂ ಶಕ್ತಿ ಸಮಗ್ರ ಅಭಿವೃದ್ಧಿ ಸಂಸ್ಥೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಧಾರವಾಡ ಮಹಾನಗರ ಪಾಲಿಕೆಯ ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ತಾಯಿಯಂದಿರಿಗೆ ಹಣ್ಣು ಹಂಪಲಗಳನ್ನು ಕೊಟ್ಟರು.

 ಸಂಸ್ಥೆಯ ಅಧ್ಯಕ್ಷರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ  ನಿರ್ದೇಶಕರಾದ ಶರಣು ಅಂಗಡಿ, ವಿಜಯ ಸಾಬಳೆ, ಅಮಿತ್ ಪಾಟೀಲ್, ರಾಹುಲ್ ಮಲ್ಲಿಗವಾಡ, ಪವನ ತಿಟೆ, ಸಂತೋಷ ಗುಡಿ, ಸುರಂಜನ್ ಗುಂಡೆ, ರಾಜೇಶ್ ನಾಯಕ್, ಕಿರಣಕುಮಾರ ಹಂಚಿನಮನಿ, ತಾನಾಜಿ ರೋಕಡೆ ಇನ್ನಿತರರು ಭಾಗಿಯಾಗಿದ್ದರು.