ನಗರದ ಝೀರಾ ಕನವೇನಷಲ್ ಹಾಲ್ ನಲ್ಲಿ ಕೇಂದ್ತ ಸಚಿವರಿಗೆ ಸನ್ಮಾನ.. | Bidar |

ಸಮಸ್ಯೆ ಬಗೆಹರಿಸುವಂತೆ ನಗರದ ಝೀರಾ ಕನವೇನಷಲ್ ಹಾಲ್ನ ಬಳಿ ಮನವಿ ಮಾಡಲು ಬಂದ ಜಾರಂಜಾ ಸಂತ್ರಸ್ತರನ್ನು ಕೇಂದ್ರ ಸಚಿವ ಭಗವಂತ ಖುಭಾ ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿ ಸನ್ಮಾನ ಸ್ವೀಕಾರ ಸಮಾರಂಭದಲ್ಲಿ ಮಗ್ನರಾಗಿದ್ದರು. ವೇದಿಕೆಯ ಪಕ್ಕಕ್ಕೆ ಮನವಿ ಕೊಡಲು ಬಂದು ನಿಂತರೂ ಕ್ಯಾರೆ ಎನ್ನದ ಕೇಂದ್ರ ಸಚಿವ ಭಗವಂತ ಖುಭಾ, ಮನೆ ಮಠ ಕಳೆದುಕೊಂಡ ರೈತರ ಗೋಳು ಕೇಳದೇ ತಮ್ಮ ಪಾಡಿಗೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಒಟ್ಟಿನಲ್ಲಿ ಕೇಂದ್ರ ಸಚಿವರಿಗೆ ಜನರ ನೋವಿಗಿಂತ ಸನ್ಮಾನ ಸಮಾರಂಭವೇ ಮುಖ್ಯವಾಗಿತ್ತು ಎಂದು ವರ್ತಿಸಿದರಲ್ಲದೇ, ಕೇಂದ್ರ ಸರ್ಕಾರ ಹಾರ ತುರಾಯಿ ನಿμÉೀಧ ಮಾಡಿದ್ದರೂ ನಾಗರಿಕ ಸನ್ಮಾನದಲ್ಲಿ ಪೇಟಾ ಹಾರಾ ತುರಾಯಿದ್ದೆ ಕಾರುಬಾರಾಗಿತ್ತು.