ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಲು ಬಿಜೆಪಿಕೆ ನೈತಿಕತೆ ಏನಿದೆ? | Chikmagalur | Congress |
ನಾವು ಶ್ರೀರಾಮಚಂದ್ರನ ಮೊಮ್ಮಕ್ಕಳು ಎಂದು ಹೇಳಿಕೊಳ್ಳಲು ನಾಚಿಕೆ ಆಗಲ್ವಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಲು ನೈತಿಕತೆ ಏನಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ವಾಗ್ದಾಳಿ ನಡೆಸಿದರು. ಚಿಕ್ಕ್ಮಗಳೂರಿನಲ್ಲಿ ಮಾತನಾಡಿದ ಅವರು ಕಳೆದ ಬಾರಿ ಗೆದ್ದಾಗ 3 ಮುಖ್ಯಮಂತ್ರಿ, 3 ಪಕ್ಷಗಳಾಗಿ ವಿಭಜನೆಯಾಯ್ತು. ಈ ಮುಖ್ಯಮಂತ್ರಿಯೂ ಬದಲಾಗ್ತಾರೆ ಅನ್ನೋ ಮುನ್ಸೂಚನೆಯನ್ನ ಈಶ್ವರಪ್ಪ ಹೇಳಿದ್ದಾರೆ. ಈಶ್ವರಪ್ಪ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಈಶ್ವರಪ್ಪನವರೇ ವರ್ಷವಾದ್ರು ತಾಪಂ, ಜಿಪಂ ಎಲೆಕ್ಷನ್ ಏಕೆ ಮಾಡಿಲ್ಲ, ಧೈರ್ಯ ಇಲ್ವಾ ಎಂದು ಪ್ರಶ್ನಿಸಿದರು.