ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಅಭ್ಯರ್ಥಿ ಚೆನ್ನರಾಜ ಹಟ್ಟಿಹೊಳಿ |Belagavi|

ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ, ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಚೆನ್ನರಾಜ ಹಟ್ಟಿಹೊಳಿ 2,510 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.1,945 ಮತಗಳನ್ನು ಪಡೆಯುವ ಮೂಲಕ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಎರಡನೇಯ ಸ್ಥಾನದಲ್ಲಿದ್ದಾರೆ. 1,200 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಮಹಂತೇಶ್ ಕವಟಗಿಮಠ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಸಂಧರ್ಭದಲ್ಲಿ ವಿವೇಕ ಜತ್ತಿ ರಿಯಾಜ್ ಚೌಗಲಾ ಖಾಜಿ ಸರ್ ಶಾಹಿನ್ ಸಯ್ಯದ್ ರೆಹಮಾನ್ ಮೊಕಾಶಿ ಜಿ ಆರ್ ಪೂಜಾರಿ ಲಗಮಣ್ಣಾ ಕಳಸಣ್ಣವರ ಶಿವು ಖಿಲಾರಿ ಲಕ್ಷ್ಮಣ ಅಲಕನೂರ ಮುಸ್ತಾಕ ಪುಲತಾಂಬೆ ಪಾಂಡು ರಂಗಸೂಭೆ ರಪೀಕ ಖಾಜಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು