ಮೊದಲ ಬಾರಿಗೆ ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಮೇಯರ್; ಸುನಂದಾ ಪಾಲನೇತ್ರ ಮಹಾಪೌರರಾಗಿ ಆಯ್ಕೆ

ಮೊದಲ ಬಾರಿಗೆ ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಮೇಯರ್; ಸುನಂದಾ ಪಾಲನೇತ್ರ ಮಹಾಪೌರರಾಗಿ ಆಯ್ಕೆ

 ಇದೇ ಮೊದಲ ಬಾರಿಗೆ ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಮೇಯರ್; ಸುನಂದಾ ಪಾಲನೇತ್ರ ಮಹಾಪೌರರಾಗಿ ಆಯ್ಕೆ

ಮೈಸೂರು: ಇದೇ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಬಿಜೆಪಿಗೆ ದೊರಕಿದೆ.
ಬಿಜೆಪಿಯ ಸುನಂದಾ ಪಾಲನೇತ್ರ ಅವರು ನೂತನ ಮೈಸೂರು ಮೇಯರ್ ಆಗಿ ಆಯ್ಕೆಯಾಗಿ ಮೈಸೂರು ಪಾಲಿಕೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಪರ ೨೬ ಮತಗಳು ಲಭಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಪರ ೨೨ ಮತ ಚಲಾವಣೆಯಾಗಿದೆ.
೨೫ ವರ್ಷಗಳಿಂದ ಪಾಲಿಕೆಯ ರಾಜಕಾರಣದಲ್ಲಿದ್ದೇನೆ. ೫ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಇದು ನನ್ನ ಕೊನೆಯ ಚುನಾವಣೆ ಎಂದು ಮತದಾನದ ವೇಳೆ ಸುನಂದಾ ಪಾಲನೇತ್ರ ಹೇಳಿದ್ದರು. ಕಳೆದ ಬಾರಿ ಮೇಯರ್ ಚುನಾವಣೆ ವೇಳೆಯೂ ಬಿಜೆಪಿಯಿಂದ ಸುನಂದಾ ಪಾಲನೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಆದರೆ ಸೋತಿದ್ದರು. ಈ ಸಲ ಗೆಲುವಿನ ನಗೆ ಬೀರಿದ್ದಾರೆ.
ಬಿಜೆಪಿಯೂ ಈವರೆಗೆ ಒಮ್ಮೆಯೂ ಮೈಸೂರು ಮಹಾನಗರ ಪಾಲಿಕೆ ಮೇಯರ್ ಗದ್ದುಗೆ ಏರಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಬಿಜೆಪಿಗೆ ಲಭಿಸಿದೆ.
ಕಾಂಗ್ರೆಸ್‌ಗೆ ಧಿಕ್ಕಾರ ಕೂಗಿ ಜೆಡಿಎಸ್ ಸದಸ್ಯರು ಹೊರನಡೆದಿದ್ದಾರೆ. ಎಲ್ಲಾ ಅಧಿಕಾರ ನಮಗೆ ಬೇಕು ಎಂದು ಅಧಿಕಾರದ ಲಾಲಾಸೆ ಕಾಂಗ್ರೆಸ್‌ನದು. ಉಪಮೇಯರ್ ಇದ್ದರೂ ಎಲ್ಲವೂ ನಮಗೆ ಬೇಕು ಎಂದು ಕಾಂಗ್ರೆಸ್ ಹೇಳುತ್ತಾರೆ ಎಂದು ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಬಿಜೆಪಿಗೆ ಲಭಿಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿದೆ. ಮೂರು ಬಾರಿ ಕಾರ್ಪೋರೇಟರ್ ಆಗಿರುವುದು ಹಾಗೂ ಬಿ.ಎಸ್. ಯಡಿಯೂರಪ್ಪ ಕುಟುಂಬದ ಸಂಬAಧಿಕರು ಕೂಡ ಆಗಿದ್ದಾರೆ.