ಸಾವರ್ಕರ್ ಭಾವಚಿತ್ರ ವಿವಾದ: ಉಡುಪಿಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಉಡುಪಿ: ಇಲ್ಲಿನ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಹಾಕಲಾಗಿರುವ ಸಾವರ್ಕರ್ ಫ್ಲೆಕ್ಸ್ ತೆರವಿಗೆ ಕಾಂಗ್ರೆಸ್ ಮನವಿ ನೀಡಿರುವುದನ್ನು ವಿರೋಧಿಸಿ ಬುಧವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ವಿಖ್ಯಾತ್ ಶೆಟ್ಟಿ 'ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಭಾವಚಿತ್ರ ತೆರವಿಗೆ ಒತ್ತಾಯಿಸುವ ಮೂಲಕ ಕಾಂಗ್ರೆಸ್ ಹೋರಾಟಗಾರನಿಗೆ ಅವಮಾನ ಮಾಡಿದೆ. ಸಾವರ್ಕರ್ ಭಾವಚಿತ್ರ ತೆರವುಗೊಳಿಸಲು ಬಿಡುವುದಿಲ್ಲ.
ಬದಲಾಗಿ ಜಿಲ್ಲೆಯಾದ್ಯಂತ ಸಾವರ್ಕರ್ ಭಾವಚಿತ್ರ ಇರುವ ಫ್ಲೆಕ್ಸ್‌ಗಳನ್ನು ಹಾಕುವುದಾಗಿ ತಿಳಿಸಿದರು.
ಫ್ಲೆಕ್ಸ್ ಹಾಕಲಾಗಿರುವ ಬ್ರಹ್ಮಗಿರಿ ವೃತ್ತವನ್ನು ಸ್ವಚ್ಛಗೊಳಿಸಿದ ಕಾರ್ಯಕರ್ತರು ಸಾವರ್ಕರ್ ಫ್ಲೆಕ್ಸ್‌ಗೆ ಹೂವಿನ ಮಾಲೆ ಹಾಕಿ