ಮಂಗಳಮುಖಿಯರಿಗೆ ಟಾಟಾ ಸ್ಟೀಲ್ ನೀಡಿದೆ ಉದ್ಯೋಗ ಅವಕಾಶ

ಸಿಗ್ನಲ್‌ಗಳಲ್ಲಿ ಹಣ ಕೇಳುವ ಮಂಗಳಮುಖಿಯರು ಒಂದೆಡೆಯಾದರೆ, ಕೆಲಸ ಸಿಕ್ಕರೆ ದುಡಿದು ತಿನ್ನುತ್ತೇವೆ ಎನ್ನುವ ಹಲವು ಮಂಗಳಮುಖಿಯರಿದ್ದಾರೆ. ಇಂಥವರಿಗಾಗಿ ಟಾಟಾ ಸ್ಟೀಲ್ ಉದ್ಯೋಗ ಅವಕಾಶ ನೀಡಿದೆ. ಈ ಕೆಲಸ ಕೇವಲ ಮಂಗಳಮುಖಿಯರಿಗೆ ಮಾತ್ರ ಮೀಸಲಿಡಲಾಗಿದೆ.
ಭೂಮಿಗೆ ಸಂಬಂಧಿಸಿದ ವಸ್ತುಗಳನ್ನು ಯಂತ್ರೋಪಕರಣ ಬಳಸಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುವ ಕೆಲಸಕ್ಕಾಗಿ ಟಾಟಾ ಸ್ಟೀಲ್ ಮಂಗಳಮುಖಿಯರಿಗೆ ಆಹ್ವಾನ ನೀಡಿದೆ. ಭಾರತೀಯ ಉಕ್ಕಿನ ದೈತ್ಯ ಕಂಪನಿ ಟಾಟಾ ಸ್ಟೀಲ್ ತನ್ನ ಪಶ್ಚಿಮ ಬೊಕಾರೊ ವಿಭಾಗದಲ್ಲಿ ಹೆವಿ ಅರ್ಥ್ ಮೂವಿಂಗ್ ಮಶಿನರಿ ಆಪರೇಟರ್ ಪಾತ್ರಗಳಿಗಾಗಿ ಟ್ರಾನ್ಸ್‌ಜೆಂಡರ್‌ಗಳಿಂದ ಮಾತ್ರ ಅರ್ಜಿಯನ್ನು ಕೋರಿದೆ.
ಟಾಟಾ ಸ್ಟೀಲ್ ಇಂಡಿಯಾ ಕೆಲಸದಲ್ಲಿ ಎಲ್ಲರಿಗೂ ಸಮಾನತೆ ಇರಲಿ ಎನ್ನುವ ಕಾರಣಕ್ಕೆ ಟ್ರಾನ್ಸ್‌ಜೆಂಡರ್‌ಗಳಿಗೆ ಮಾತ್ರ ಆಪರೇಟರ್ ಟ್ರೇನಿ ಕೆಲಸಕ್ಕೆ ಆಹ್ವಾನ ನೀಡಿದೆ. ಇದರಲ್ಲಿ ಲೆಸ್ಬಿಯನ್, ಗೇ, ಬೈಸೆಕ್ಷುಯಲ್, ಮಂಗಳಮುಖಿಯರಿಗೆ ರೆಸ್ಯೂಮ್ ಕಳಿಸುವಂತೆ ಕಂಪನಿ ಹೇಳಿದೆ.
ಕೆಲಸ ಪಡೆಯಲು ಮೆಟ್ರಿಕ್ಯುಲೇಶನ್ ಉತ್ತೀರ್ಣರಾಗಿರಬೇಕು. ಜೊತೆಗೆ ಸೆ,1 1981ರಿಂದ ಸೆ.1 2003ರ ನಡುವೆ ಜನಿಸಿರಬೇಕು. ಉದ್ಯೋಗ ಆಕಾಂಕ್ಷಿಗಳಿಗೆ ಮೊದಲು ಲಿಖಿತ ಪರೀಕ್ಷೆ ಮಾಡಲಾಗುವುದು. ನಂತರ ಸಂದರ್ಶನ, ಪ್ರಾಯೋಗಿಕ ದೃಷ್ಟಿಕೋನ ಪರೀಕ್ಷೆ ಮಾಡಲಾಗುವುದು. ಇದೆಲ್ಲದರಲ್ಲೂ ಉತ್ತೀರ್ಣರಾದವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗುವುದು ಎಂದು ಕಂಪನಿ ಹೇಳಿದೆ.