BIG NEWS : ಫಲಿಸಿತು ಹೃತಿಕ್ಷ ಪ್ರಾರ್ಥನೆ : ಕೊನೆಗೂ ಕೈಸೇರಿದ 'ತಾಯಿಯ ಅಮೂಲ್ಯ ನೆನಪು'ಗಳ ಮೊಬೈಲ್

BIG NEWS : ಫಲಿಸಿತು ಹೃತಿಕ್ಷ ಪ್ರಾರ್ಥನೆ : ಕೊನೆಗೂ ಕೈಸೇರಿದ 'ತಾಯಿಯ ಅಮೂಲ್ಯ ನೆನಪು'ಗಳ ಮೊಬೈಲ್

ಮಡಿಕೇರಿ : ಮೂರು ತಿಂಗಳ ಹಿಂದೆ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಂತ ತಾಯಿಯ ಬಳಿಯಲ್ಲಿದ್ದಂತ ಮೊಬೈಲ್ ಅನ್ನು, ಕೋವಿಡ್ ಆಸ್ಪತ್ರೆಯಲ್ಲಿ ಯಾರೋ ಕದ್ದಿದ್ದರು. ಇಂತಹ ಮೊಬೈಲ್ ಹುಡುಕಿ ಕೊಡುವಂತೆ ಮೃತ ತಾಯಿಯ ಪುತ್ರಿ ಹೃತೀಕ್ಷಾ ಜಿಲ್ಲಾಧಿಕಾರಿಗಳು, ಎಸ್ಪಿಗಳಲ್ಲಿ ಮನವಿ ಮಾಡಿದ್ದರು. ಅವಳ ಪ್ರಾರ್ಥನೆಗೆ ಫಲ ಸಿಕ್ಕಿದ್ದು, ಮೂರು ತಿಂಗಳ ಬಳಿಕ, ಆಕೆಯ ಮೊಬೈಲ್ ಪತ್ತೆ ಹಚ್ಚಿ, ಮರಳಿ ಹೃತೀಕ್ಷಾಗೆ ನೀಡಲಾಗಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಮೃತ ತಾಯಿಯ ಬಳಿಯಲ್ಲಿದ್ದಂತ ಮೊಬೈಲ್ ನಲ್ಲಿ ನನ್ನ ತಾಯಿಯ ಅಮೂಲ್ಯ ನೆನಪುಗಳಿದ್ದಾವೆ. ಆ ಮೊಬೈಲ್ ಯಾರೋ ಕದ್ದಿದ್ದಾರೆ. ದಯವಿಟ್ಟು ಹುಡುಕಿಸಿಕೊಡುವಂತೆ ಕೊಡಗಿನಲ್ಲಿ ಹೃತೀಕ್ಷಾ ಡಿಸಿ, ಎಸ್ಪಿ ಹಾಗೂ ಜನಪ್ರತಿನಿಧಿಗಳನ್ನು ಕೋರಿಕೊಂಡಿದ್ದರು.

ಈ ಹಿನ್ನಲೆಯಲ್ಲಿ ಮಡಿಕೇರಿ ನಗರ ಪೊಲೀಸರು ಮೊಬೈಲ್ ಹುಡುಕೋದಕ್ಕೆ ಹರಸಾಹಸವನ್ನೇ ಮಾಡಬೇಕಾಯಿತು. ಕೊನೆಗೆ ಒಬ್ಬ ವ್ಯಕ್ತಿಯನ್ನು ಕೂಡ ಬಂಧಿಸಲಾಗಿತ್ತು. ಆದ್ರೇ ನೋ ಯೂಸ್.. ಆದ್ರೇ.. ಮೂರು ತಿಂಗಳ ಬಳಿಕ ಆಸ್ಪತ್ರೆಯ ಸ್ಟೋರ್ ರೂಂ ಸ್ವಚ್ಛಗೊಳಿಸೋ ವೇಳೆಯಲ್ಲಿ ಬಾಲಕಿಯ ಮೊಬೈಲ್ ಪತ್ತೆಯಾಗಿದ್ದು, ಸಿಬ್ಬಂದಿಗಳು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇಂತಹ ಮೊಬೈಲ್, ಹೃತೀಕ್ಷಾ ತಾಯಿಯದ್ದು ಎಂಬುದಾಗಿ ಗುರ್ತಿಸಿ, ಆಕೆಯನ್ನು ಠಾಣೆಗೆ ಕರೆಸಿ, ಅಮ್ಮನ ನೆನಪುಗಳಿರುವಂತ ಪೋನ್ ನೀಡಲಾಗಿದೆ.