ರಾಯಚೂರಿನಲ್ಲಿ ಜೋಳಕ್ಕೆ ಕೀಟಬಾಧೆ ಕಾಟ: ನಷ್ಟದ ಆತಂಕದಲ್ಲಿ ಅನ್ನದಾತ!

ಬೆಳೆಗೆ ಈ ಕೀಟಗಳು ಒಮ್ಮೆ ಆವರಿಸಿದರೆ ನೇರವಾಗಿ ಜೋಳದ ಎಲೆ ಮತ್ತು ಸುಳಿಯನ್ನು ಕೊರೆದು ತಿಂದು ಹಾಳು ಮಾಡುತ್ತದೆ. ಕೀಟದ ಬಾಧೆಯಿಂದ ಜೋಳ ಬೆಳೆಯು ತೆನೆ ಬಿಡಲೂ ಸಾಧ್ಯ ಆಗಿಲ್ಲ. ಹಂತ ಹಂತವಾಗಿ ಗಿಡದಿಂದ ಗಿಡಕ್ಕೆ ಹರಡುತ್ತಿದ್ದು, ಕೊನೆಗೆ ಬೆಳವಣಿಗೆ ಕುಂಠಿತವಾಗಿ ಗಿಡ ಒಣಗಿ ಹೋಗುತ್ತಿದ್ದು, ರೈತರಿಗೆ ಈ ಕೀಟ ನಾಶಕ್ಕೆ ಪರಿಹಾರ ದೊರೆಯದಂತಾಗಿದೆ.

ರಾಯಚೂರಿನಲ್ಲಿ ಜೋಳಕ್ಕೆ ಕೀಟಬಾಧೆ ಕಾಟ: ನಷ್ಟದ ಆತಂಕದಲ್ಲಿ ಅನ್ನದಾತ!
: ಹೊಸೂರು ಸೇರಿ ತಾಲೂಕು ವ್ಯಾಪ್ತಿಯಲ್ಲಿ ರೈತರು ಸಾಕಷ್ಟು ಬೆಳೆದಿದ್ದು, ಬೆಳೆಗೆ ದೊಣ್ಣೆ ಹಾಗೂ ರಬ್ಬರ್‌ ಕೀಟ ಬಾಧೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೀಟಬಾಧೆ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಜೋಳದ ಬೆಳೆಗೆ ಕಾಡಿದ್ದ ಕೀಟಬಾಧೆ ಈ ವರ್ಷವೂ ರನ್ನು ತೊಂದರೆಗೆ ಸಿಲುಕಿಸಿದೆ. ರೈತರ ಬದುಕನ್ನು ಕಿತ್ತು ತಿನ್ನುತ್ತಿರುವ ಕೀಟನಾಶಕಗಳು ರೈತರ ನಿದ್ದೆಗೆಡಿಸಿದ್ದು, ಒಮ್ಮೆ ಜಮೀನಿನಲ್ಲಿ ದೊಣ್ಣೆ, ರಬ್ಬರ್‌ ಹುಳು ಕಾಣಿಸಿಕೊಂಡರೆ ಅದು ಬೆರಳೆಣಿಕೆ ದಿನಗಳಲ್ಲೇ ಬೆಳೆಯನ್ನು ತಿಂದು ನಾಶ ಮಾಡುತ್ತದೆ. ಈ ಹುಳುವಿನಲ್ಲಿ 4 ರಿಂದ 5 ತಳಿಗಳು ಬರುತ್ತವೆ. ಒಂದು ಹುಳು ಕನಿಷ್ಠ 1000 ರಿಂದ 2000 ಮೊಟ್ಟೆಗಳನ್ನು ಎಲೆ ಮೇಲೆ ಇಡುತ್ತಿದ್ದು, ಈ ಮೊಟ್ಟೆಗಳು ಮರಿಯಾಗಿ ಜಮೀನಿಗೆ ಆವರಿಸಿ ಬೆಳೆಯನ್ನು ಹಾಳು ಮಾಡುತ್ತಿವೆ. ಸಂಕಷ್ಟದಲ್ಲಿ ರೈತಜಮೀನಲ್ಲಿ ಜೋಳ ಬೆಳೆ ಫಲವತ್ತಾಗಿ ಬೆಳೆದಿದೆ. ಆದರೆ ಈ ಹುಳುಗಳು ಬೆಳೆಯನ್ನು ತಿಂದು ಹಾಳು ಮಾಡುತ್ತಿವೆ. ಕೀಟಬಾಧೆ ಕಾಟ ನಿಯಂತ್ರಣಕ್ಕೆ ರೈತರಿಗೆ ತೊಂದರೆಯಾಗುತ್ತದೆ. ಬೆಳೆ ನಾಶದ ಆತಂಕ ಬೆಳೆಗೆ ಈ ಕೀಟಗಳು ಒಮ್ಮೆ ಆವರಿಸಿದರೆ ನೇರವಾಗಿ ಜೋಳದ ಎಲೆ ಮತ್ತು ಸುಳಿಯನ್ನು ಕೊರೆದು ತಿಂದು ಹಾಳು ಮಾಡುತ್ತದೆ. ಕೀಟದ ಬಾಧೆಯಿಂದ ಜೋಳ ಬೆಳೆಯು ತೆನೆ ಬಿಡಲೂ ಸಾಧ್ಯ ಆಗಿಲ್ಲ. ಹಂತ ಹಂತವಾಗಿ ಗಿಡದಿಂದ ಗಿಡಕ್ಕೆ ಹರಡುತ್ತಿದ್ದು, ಕೊನೆಗೆ ಬೆಳವಣಿಗೆ ಕುಂಠಿತವಾಗಿ ಗಿಡ ಒಣಗಿ ಹೋಗುತ್ತಿದ್ದು, ರೈತರಿಗೆ ಈ ಕೀಟ ನಾಶಕ್ಕೆ ಪರಿಹಾರ ದೊರೆಯದಂತಾಗಿದೆ. ಕಳೆದ 2 ವರ್ಷದಿಂದ ದೊಣ್ಣೆ ಹಾಗೂ ರಬ್ಬರ್‌ ಕೀಟ ನಾಶದಿಂದ ಜೋಳದ ಬೆಳೆಗೆ ತೊಂದರೆ ಉಂಟಾಗಿದ್ದು ಒಂದು ಹುಳು ಕಾಣಿಸಿಕೊಂಡರೆ ಜಮೀನಲ್ಲಿ ಬೆಳೆದ ಬೆಳೆಯನ್ನು ಸಂಪೂರ್ಣ ನಾಶವಾಗುತ್ತಿದ್ದು, ಮಾಡಿದ ಸಾಲ ತೀರಿಸಲಾಗದೆ ಜಮೀನನ್ನು ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈರಣ್ಣ ಯಾದವ್‌, ರೈತ, ಹೊಸೂರು ಮೆಕ್ಕೆ ಜೋಳಕ್ಕೆ ದೊಣ್ಣೆ ಕೀಟ ಬಾಧೆ ಹೆಚ್ಚು ಬರುತ್ತಿದ್ದು, ರೈತರು ಕೀಟ ನಿಯಂತ್ರಣಕ್ಕೆ ಕೃಷಿ ಅಧಿಕಾರಿಗಳ ಸಲಹೆ ಪಡೆದು ಮುಂದಾಗಬೇಕು. ಡಾ.ಭೀಮಣ್ಣ, ಪ್ರಾಧ್ಯಾಪಕರು, ಕೃಷಿ ವಿಶ್ವವಿದ್ಯಾಲಯ, ರಾಯಚೂರು