BDA ನನಗೆ ಬದಲಿ ನಿವೇಶನ ಕೊಡಲೇಬೇಕು; ಆರಗ ಜ್ಞಾನೇಂದ್ರ

ಬೆಂಗಳೂರು: ಮಗೆ ಮಂಜೂರು ಮಾಡಿದ್ದ ನಿವೇಶನವನ್ನು ಹಿಂಪಡೆಯುವಂತೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಗೌರವಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನಾನು ಈಗ ಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತೇನೆ. ಬಿಡಿಎ ಮಾಡುವ ಅವಸರಗಳಿಂದಾಗಿ ಅವಾಂತರಗಳು ಆಗುತ್ತಿವೆ. ನನಗೆ ಬಿಡಿಎ ಬದಲಿ ನಿವೇಶನ ಕೊಡಲೇಬೇಕು ಎಂದು ಆಗ್ರಹಿಸಿದರು. ಬಿಡಿಎ ಅಧಿಕಾರಿಗಳು ನನ್ನಿಂದ ಹಣ ಕಟ್ಟಿಸಿಕೊಂಡಿದ್ದಾರೆ. ನಾನು ನ್ಯಾಯಯುತವಾಗಿಯೇ ನಿವೇಶನ ಖರೀದಿಸಿದ್ದೇನೆ. ಆದರೆ ಬಿಡಿಎ ಮಾಡಿದ ತಪ್ಪುಗಳಿಂದಾಗಿ ಸಮಸ್ಯೆ ಆಗುತ್ತಿದೆ. ಬಿಡಿಎ ಪರಿಸ್ಥಿತಿಯೇ ಸರಿಯಿಲ್ಲ. ಅಲ್ಲಿ ಎಲ್ಲವೂ ಅಯೋಮಯ ಎಂದರು