ಸಿದ್ದೇಶ್ವರ ಸ್ವಾಮೀಜಿ ಒಪ್ಪಿದ್ರೆ ಎಲ್ಲ ರೀತಿಯ ಚಿಕಿತ್ಸೆಗೂ ಸಿದ್ದ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿ ಅವರು ಒಪ್ಪಿಗೆ ಕೊಟ್ಟರೆ ಎಲ್ಲ ರೀತಿಯ ಚಿಕಿತ್ಸೆಗೂ ಸಿದ್ದತೆ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರದಿಂದ ಸ್ವಾಮೀಜಿಗಳಿಗೆ ಚಿಕಿತ್ಸೆಕೊಡಲು ಸಿದ್ದ ಎಂದು ತಿಳಿಸಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿಗಳಿಗೆ ಎಲ್ಲಿ ಬೇಕಾದ್ರೂ ಚಿಕಿತ್ಸೆ ಕೊಡಿಸಲು ತಯಾರಿದ್ದೇವೆ. ಸ್ವಾಮೀಜಿ ಮಹಾವಿಭೂತಿ ಪುರುಷರು ಪುಣ್ಯದ ಜೀವ, ಸ್ಥಳೀಯವಾಗಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.