ಅತಿವೃಷ್ಟಿ ಪರಿಹಾರಕ್ಕೆ ಕಾರ್ಯಪಡೆ ರಚನೆ : ಬೊಮ್ಮಾಯಿ

ಅತಿವೃಷ್ಟಿ ಪರಿಹಾರಕ್ಕೆ ಕಾರ್ಯಪಡೆ ರಚನೆ : ಬೊಮ್ಮಾಯಿ

ಬೆಂಗಳೂರು,ಅ.21- ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ, ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ವಿಪತ್ತು ಟಾಸ್ಕ್ ಫೋರ್ಸ್‍ನ್ನು ಜಿಲ್ಲಾ ಮಟ್ಟದಲ್ಲಿ ರಚಿಸಬೇಕು ಎಂದು ಮುಖ

ಈ ಸಂಬಂಧ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ, ಕಳೆದ 4 ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವುದರಿಂದ, ಜಿಲ್ಲಾ ಮಟ್ಟದಲ್ಲೇ ಟಾಸ್ಕ್ ಫೋರ್ಸ್ ರಚನೆ ಮಾಡಲು ಸೂಚನೆ ಕೊಟ್ಟಿದ್ದಾರೆ.

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿರುವ ಸಿಬ್ಬಂದಿಗೆ ವಿಪತ್ತು ನಿರ್ವಹಣೆಯ ತರಬೇತಿ ನೀಡಿ ಇವರ ಸಾಮಥ್ರ್ಯವನ್ನು ಬಲಪಡಿಸಬೇಕು. ಜೊತೆಗೆ ಪ್ರವಾಹ ಪರಿಸಿ ತಿಯನ್ನು ಮೊಟ್ಟೆ, ಮೊದಲು ಸಮುದಾಯ ಮಟ್ಟದ ಜನರುಎದುರಿಸುವುದರಿಂದ, ಗ್ರಾಮ ಮಟ್ಟದಲ್ಲಿರುವ ಸಮುದಾಯ ಮಟ್ಟದ ಸ್ವಯಂ ಸೇವಕರನ್ನು ಗುರುತಿಸಿ ವಿವತ್ತು ನಿರ್ವಹಣೆ ತರಬೇತಿಯನ್ನು ನೀಡಿ ಇವರ ಸೇವೆಯನ್ನು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.

್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮನೆ ಹಾನಿ ಪರಿಹಾರವನ್ನು ಮಾರ್ಪಡಿಸಿ, 201- 2020 ಮತ್ತು 2021ನೇ ಸಾಲಿನಲ್ಲಿ ಭಾಗಶಃ ಹಾನಿಯಾದ ಸಿ ವರ್ಗದಲ್ಲಿ 50,000 ರೂ.ನಂತೆ ಮನೆ ಪರಿಹಾರ ಪಡೆದಿರುವ ಮನೆಗಳು ಪುನಃ 2022ನೇ ಸಾಲಿನಲ್ಲಿ ಜಂಟಿ ಸಮೀಕ್ಷೆ, ಅನುಸಾರ ಅನ್ನಸ್ತಿಯಿಂದ ಎ, ಬಿ ಮತ್ತು ¿ಸಿ¿ ವರ್ಗದಲ್ಲಿ, ಹಾನಿಯಾದಲ್ಲಿ ಪರಿಹಾರ ಪಾವತಿಸುವಂತೆ ಹೇಳಿದ್ದಾರೆ.

ಅತಿವೃಷ್ಟಿಯಿಂದ ರಾಜ್ದ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿದ್ದು, ಇದರಿಂದ ಕೃಷಿ ಭೂಮಿಯಲ್ಲಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿರುವುದು ಕಂಡು ಬಂದಿದೆ. ಇಂತಹ ಪ್ರಕರಣಗಳಿಗೆ ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಪರಿಹಾರ ಪಾವತಿಸಲು ಅವಕಾಶವಿರುವುದರಿಂದ, ಜಿಲ್ಲಾಕಾರಿಗಳು ಇಂತಹ ಪ್ರಕರಣಗಳನ್ನು ಕೂಲಕಂಪವಾಗಿ ಪರಿಶೀಲಿಸಿ ಪರಿಹಾರ ಪಾವತಿಸುವಂತೆ ತಾಕೀತು ಮಾಡಿದ್ದಾರೆ.

ಬೆಳೆ ಹಾನಿ ಇನ್ ಪುಟ್ ಸಬ್ಸಿಡಿಯನ್ನು ಶೀಘ್ರವಾಗಿ ತಂತ್ರಾಂಶದಲ್ಲಿ ನಮೂದಿಸುವುದು, 2019-2020 ಮತ್ತು 2021ನೇ ಸಾಲಿನಲ್ಲಿ ಎಅಥವಾ ಬಿ ವರ್ಗದಲ್ಲಿ ಹಾನಿಯಾದ ಮನೆಗಳು ಈವರೆಗೂ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗದಂತಹ ಮನೆಗಳನ್ನು ಜಿಲ್ಲಾಕಾರಿಗಳು ಪರಿಶೀಲಿಸಿ ರದ್ದುಗೊಳಿಸುವಂತೆ ನಿದೇರ್ಶನ ನೀಡಿದ್ದಾರೆ.

ಪ್ರಾರಂಭವಾಗಿರುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನೆ ಮಾಲೀಕರಿಗೆ ನೋಟೀಸ್‍ಗಳನ್ನು ನೀಡುವುದು,ಪ್ರತಿ ಬಾರಿ ಪ್ರವಾಹ ಎದುರಾಗುತ್ತಿರುವ ಜಲಾನಯನ ಗ್ರಾಮಗಳನ್ನು ಗುರುತಿಸಿ, ಸುರಕ್ಷಿತ ಸ್ಥಳಗಳಿಗೆ ಸ್ಮಳಾಂತರಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕೆರೆಗಳು ತೀವ್ರವಾಗಿ ತುಂಬುತ್ತಿರುವುದರಿಂದ ನೀರಿನ ರಭಸ ತಡೆದುಕೊಳ್ಳಲು ಸಾಧ್ಯವಾಗದೆ ಬಲಗೊಂಡ ಕೆರೆಗಳು ಒಡೆಯುತ್ತಿದ್ದು, ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿರುವುದು ಕಂಡು ಬಂದಿದೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಶಿಥಿಲಗೊಂಡ ಕೆರೆಗಳ ಸರ್ವೆ ನಡೆಸಿ ಬಲಗೊಳಿಸಬೇಕು ಎಂದು ಸೂಚಿಸಿದ್ದಾರೆ.