ಗಮನ ಸೆಳೆದ ದಾಂಡಿಯಾ ನೃತ್ಯ

ಮಹಿಳೆಯರು, ಯುವತಿಯರ ದಾಂಡಿಯಾ ನೃತ್ಯ ಎಲ್ಲರ ಗಮನ ಸೆಳೆಯಿತು.ಹೌದು. ಕೋಲಾರದ ಬಂಗಾರಪೇಟೆಯಲ್ಲಿ ಗುಜರಾತ್ ಮೂಲದ ಪಾಠೀದಾರ ಸಮುದಾಯದಿಂದ ಈ ದಾಂಡಿಯಾ ನೃತ್ಯ ನಡೆಯಿತು. ಕೊಲಾರ ಜಿಲ್ಲೆಯ ವಿವಿಧೆಡೆಯಲ್ಲಿ ವಾಸಿಸುವ ಪಾಠೀದಾರ ಸಮುದಾಯದ 300ಕುಟುಂಬಗಳು ಬಂಗಾರಪೇಟೆಗೆ ಆಗಮಿಸಿ ದಾಂಡಿಯಾ, ಸಾಮೂಹಿಕ ಪಾಲ್ಗೊಳ್ಳುವುದು ಇಲ್ಲಿನ ವಿಶೇಷವಾಗಿದೆ. ದಸರಾ ಹಿನ್ನೆಲೆಯಲ್ಲಿ ಈ ಬಾರಿ ಸಹ ಮಾತೆ ಜಗದಂಬೆಯನ್ನು ಪೂಜಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ದಾಂಡಿಯಾ ನೃತ್ಯ ಮಾಡಿದರು. ಹೀಗೆ ನೃತ್ಯ ಮಾಡಿದರೆ ತಮಗೆಲ್ಲ ಒಳ್ಳೆಯದಾಗುತ್ತದೆ ಎನ್ನು ನಂಬಿಕೆ ಪಾಠಿದಾರ ಮಹಿಳೆಯರದ್ದು.ಒಟ್ಟಾರೆಯಾಗಿ 9ದಿನಗಳ ಕಾಲ ನಡೆಯುವ ಗಾರ್ಭಾ, ದಾಂಡಿಯಾ ನೃತ್ಯಗಳು ಎಲ್ಲರ ಸೆಳೆಯುತ್ತಿವೆ.