ದಸರಾ ಬೊಂಬೆಗಳ ದರ್ಬಾರ್
ನವರಾತ್ರಿ ಬಂತೆದ್ರೆ ಸಾಕು ಎಲ್ಲೆಡೆ ಸಂಭ್ರಮ ಸಡಗರ ಮನೆ ಮಾಡುತ್ತೆ. ದುರ್ಗಿಯನ್ನು ಪ್ರತಿಷ್ಟಾಪಿಸಿ ಪೂಜಿಸೋ ವಿಶೇಷ. ಆದರೆ ಚಿಕ್ಕಮಗಳೂರಿನಲ್ಲಿ ಕುಟುಂಬವೊಂದು ದಶಕಗಳಿಂದ ಸಾವಿರಾರು ಗೊಂಬೆಗಳನ್ನು ಕೂರಿಸಿ ಪೂಜೆ ಸಲ್ಲಿಸುವುದರೊಂದಿಗೆ ನವರಾತ್ರಿಯನ್ನು ಆಚರಿಸಿಕೊಂಡು ಬರುತ್ತಿದೆ. ಒಂಬತ್ತು ದಿನಗಳ ಕಾಲ ಈ ಗೊಂಬೆಗಳನ್ನು ಕೂರಿಸಲಾಗಿದ್ದು, ರಜೆಯ ಮಜಾ ಅನುಭವಿಸುತ್ತಿರುವ ಮಕ್ಕಳಿಗೆ ಗೊಂಬೆಗಳ ಮೂಲಕ ಪುರಾಣ, ಪುಣ್ಯಕಥೆಗಳನ್ನು ಮೆಲುಕು ಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ. ಚಿಕ್ಕಮಗಳೂರು ನಗರದ ಟಿಪ್ಪುನಗರ ಬಡಾವಣೆಯಲ್ಲಿರುವ ಕುಟುಂಬವೊಂದು ಕಳೆದ 13 ವರ್ಷಗಳಿಂದಲೂ ನವರಾತ್ರಿಯ ಗೊಂಬೆಗಳನ್ನು ಕೂರಿಸಿಕೊಂಡು ಬರುತ್ತಿದೆ. ತಮಗೆ ಬಳುವಳಿಯಾಗಿ ಬಂದ ಪಟ್ಟದ ಗೊಂಬೆಗಳ ಜೊತೆಗೆ 3000 ಕ್ಕೂ ಹೆಚ್ಚು ಗೊಂಬೆಗಳನ್ನು ಕೂರಿಸಿ ಪೂಜಿಸುತ್ತಿದೆ. ತಮಿಳುನಾಡು, ಕಂಚಿ, ಮೈಸೂರು, ಚನ್ನಪಟ್ಟಣ, ಬೆಂಗಳೂರು, ಇಟಲಿ, ಫ್ರಾನ್ಸ್ ಹಾಗೂ ವಿದೇಶಗಳಿಂದ ತಂದ ಗೊಂಬೆಗಳ ಜೊತೆ ಕೊರೋನಾ ಜಾಗೃತಿ ಮೂಡಿಸುವ ಹಿನ್ನೆಲೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಮಣ್ಣಿನ ಮಡಕೆಗಳಿಂದಿಡಿದು ಈಗಿನ ಕುಕ್ಕರ್ ವರೆಗಿನ ಬೊಂಬೆಗಳೂ ಪೂಜಿಸಲ್ಪಡುತ್ತವೆ. ಒಂಬತ್ತು ದಿನಗಳ ಕಾಲ ಇವಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ, ಅಲ್ಲದೇ ನೆರೆ ಹೊರೆಯವರು ಸಹ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಮಾಯಣ, ಮಹಾಭಾರತ, ಕೃಷ್ಣ ಲೀಲೆ, 21 ಬಗೆಯ ಗಣೇಶನ ಅವತಾರ, ವಿಜಯನಗರ, ಮೈಸೂರಿನ ಇತಿಹಾಸ ಮತ್ತಿತರ ಕಥಾವಸ್ತುಗಳನ್ನು ಒಳಗೊಂಡಿರುವ ಗೊಂಬೆಗಳನ್ನು ಇಲ್ಲಿ ಕೂರಿಸಲಾಗಿದ್ದು, ಮಕ್ಕಳು ದಸರೆ ರಜೆಯನ್ನು ಗೊಂಬೆಗಳೊಂದಿಗೆ ಕಳೆಯುತ್ತಿದ್ದಾರೆ. ಹಿಂದೆ ಅನೇಕ ಕುಟುಂಬಗಳು ದಸರೆಯ ಸಂದರ್ಭದಲ್ಲಿ ಗೊಂಬೆಗಳನ್ನು ಕೂರಿಸುತ್ತಿದ್ದರು. ಆದರೆ ಆಧುನಿಕತೆಯ ಭರಾಟೆಯಲ್ಲಿ ಇದು ನೈಪಥ್ಯಕ್ಕೆ ಸರಿಯುತ್ತಿದೆ. ಆದರೂ ಸಹ ನಾಗಶ್ರೀ, ಕಿರಣ್ ಕುಟುಂಬ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದೆ. ಹಬ್ಬ ಪ್ರಾರಂಭಕ್ಕೂ ಎರಡು ದಿನಗಳ ಮುಂಚೆ ಗೊಂಬೆಗಳನ್ನು ಕೂರಿಸಲಾಗುತ್ತದೆ. ಇನ್ನು ಬಳುವಳಿಯಾಗಿ ಬಂದ ಪಟ್ಟದ ಗೊಂಬೆಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಈ ಕುಟುಂಬ ಗೊಂಬೆಗಳನ್ನು ಕೂರಿಸಿಕೊಂಡು ಬರುತ್ತಿದೆ. ಪ್ರತಿನಿತ್ಯ ಗೊಂಬೆಗಳನ್ನು ನೋಡಲು ಬರುವವರಿಗೆ ಗೊಂಬೆ ಬಾಗಿಣ, ವಿವಿಧ ಸಿಹಿ ತಿನಿಸುಗಳನ್ನು ನೀಡಲಾಗುತ್ತದೆ. ತಮ್ಮ ಮಕ್ಕಳಿಬ್ಬರೂ ದಸರಾದ ಈ 10 ದಿನಗಳ ಅವಧಿಯಲ್ಲೇ ಹುಟ್ಟಿರೋದ್ರಿಂದ ನಮ್ಮ ಮಕ್ಕಳ ಹುಟ್ಟುಹಬ್ಬವನ್ನು ಈ ರೀತಿಯಾಗಿ ವಿಶೇಷವಾಗಿ ಆಚರಿಸುತ್ತೇವೆ ಅಂತಿದ್ದಾರೆ. ಈ ಶಿಕ್ಷಕ ದಂಪತಿಗಳು