ಆರ್ ಎಸ್‌ಎಸ್ ಆನೆ ಇದ್ದಂತೆ, ತನ್ನ ದಾರಿ ಕಡೆ ಹೋಗುತ್ತಿರುತ್ತದೆ: ಸಿ.ಟಿ.ರವಿ

ಚಿಕ್ಕಮಗಳೂರು : ಆರ್ ಎಸ್‌ಎಸ್ ಆನೆ ಇದ್ದಂತೆ, ಅದರ ಪಾಡಿಗೆ ಅದು ತನ್ನ ದಾರಿ ಕಡೆ ಹೋಗುತ್ತಿರುತ್ತದೆ. ಮಧ್ಯೆ ಯಾರು, ಏನು ಮಾತನಾಡುತ್ತಾರೆಂದು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಆರ್ ಎಸ್‌ಎಸ್ ದೇಶ ಭಕ್ತ ಸಂಘಟನೆ, ಅದಿರುವ ಕಾರಣಕ್ಕೆ ಹಿಂದೂಗಳಲ್ಲಿ ಒಗ್ಗಟ್ಟು, ರಾಷ್ಟ್ರೀಯತೆ ಇದೆ. ಇಲ್ಲದಿದ್ದರೆ ಜಾತಿ,ಪ್ರಾದೇಶಿಕ ಆಧಾರದ ನಮ್ಮ ಕಿತ್ತಾಟ ಮೂರನೇಯವರಿಗೆ ಲಾಭ ಆಗುತ್ತಿತ್ತು ಎಂದರು.
ಹಿಂದೆ ದೇಶದ ಮೇಲೆ ಅಕ್ರಮಣ ಮಾಡಿದ ಸಾಮರ್ಥ್ಯಕ್ಕಿಂತ ನಮ್ಮ ಒಡಕಿನ ಲಾಭದಲ್ಲಿ ಅಕ್ರಮಣ ಮಾಡಿದರು. ಆ ಸತ್ಯದ ಅರಿವಿದ್ರೆ ಆರ್.ಎಸ್‌ಎಸ್ ಏನೆಂದು ಅರ್ಥವಾಗುತ್ತದೆ ಸತ್ಯದ ಅರಿವಿಲ್ಲದಿದ್ದರೆ ಆಗುವುದಿಲ್ಲ. ನಾನು ಬದುಕಿರುವವರೆಗೆ ಹೆಗಾದರೂ ವೋಟು ಬಂದರೆ ಸಾಕು ಅನ್ನುವಂತಹ ಮನೋಭಾವ ಇರುವವರಿಗೆ ಅರ್ಥ ಆಗುವುದಿಲ್ಲ ಎಂದರು.