ಅಷ್ಟೊಂದು ಹಣ ಇಟ್ಕೊಂಡು ಏನು ಮಾಡ್ತೀಯಾ ನಮಗೊಂದಿಷ್ಟು ಕೊಡು! ಸಿಐಡಿ ಡಿವೈಎಸ್ಪಿ ವಿರುದ್ಧ ಪಾಟೀಲ್ ವಿಡಿಯೋ ಬಾಂಬ್
ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್ ಪಿನ್ ಆರ್. ಡಿ. ಪಾಟೀಲ್ನ ಮತ್ತೊಂದು ಸ್ಫೋಟಕ ವಿಡಿಯೋ ಬಿಡಿಗಡೆಯಾಗಿದ್ದು, ಸಿಐಡಿ ತನಿಖಾಧಿಕಾರಿ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ನಿನ್ನೆ ನ್ಯಾಯಲಯದ ಮುಂದೆ ಶರಣಾಗುವ ಮುನ್ನ ಆರ್.ಡಿ.
ಕ್ರೈಂ ನಂಬರ್ 79ರ ಸಂಬಂಧ ಸಿಐಡಿ ಡಿವೈಎಸ್ಪಿ ಶಂಕರಗೌಡ ಅವರು ತನಿಖಾಧಿಕಾರಿ ಆಗಿದ್ದಾರೆ. ಎಷ್ಟು ಅಂತಾ ಕೇಸ್ ಮಾಡಿಸಿಕೊಳ್ಳತ್ತಿಯಾ, ಅದರ ಬದಲು ನಮ್ಮ ಜೊತೆ ರಾಜಿ ಆಗು. ನೀನು ಅನೇಕ ಜನರ ಬಳಿ ಹಣ ಪಡೆದು ಉದ್ಯೋಗ ಕೊಡಿಸಿದ್ದೀಯಾ. ಅಷ್ಟೊಂದು ಹಣ ತೆಗೆದುಕೊಂಡು ಏನು ಮಾಡುತ್ತೀಯಾ, ನಮಗೊಂದಿಷ್ಟು ಕೊಡು ಅಂತ ಶಂಕರಗೌಡ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪಾಟೀಲ್ ಆರೋಪ ಮಾಡಿದ್ದಾರೆ.
ಮೂರು ಕೋಟಿ ರೂಪಾಯಿ ಕೊಟ್ಟರೆ ನಾವು ಈ ಕೇಸ್ನಿಂದ ನಿನ್ನನ್ನು ಬಚಾವ್ ಮಾಡುತ್ತೇವೆ ಅಂದಿದ್ದರಂತೆ. ಈ ಡೀಲ್ಗೆ ಪಾಟೀಲ್ ಸಹ ಓಕೆ ಹೇಳಿದ್ದರಂತೆ. ಡೀಲ್ ಓಕೆ ಮಾಡಿದ ಎರಡು ದಿನದ ಬಳಿಕ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ರಿಂದ 76 ಲಕ್ಷ ರೂ. ಹಣವನ್ನು ಪಾಟೀಲ್ ಅಳಿಯ ಶ್ರೀಕಾಂತ್ ಪಡೆದಿದ್ದ. ಬಳಿಕ ಶ್ರೀಕಾಂತ್ ಮೂಲಕ 76 ಲಕ್ಷ ರೂ. ಹಣವನ್ನು ಸಿಐಡಿ ಡಿವೈಎಸ್ಪಿ ಶಂಕರಗೌಡರಿಗೆ ಸಂದಾಯ ಮಾಡಿದ್ದೇವೆ ಎಂದು ಪಾಟೀಲ್ ಹೇಳಿದ್ದಾರೆ.
ಜಾಮೀನಿನ ಮೇಲೆ ಹೊರ ಬಂದ ಬಳಿಕವೂ ಉಳಿದ ಹಣಕ್ಕಾಗಿ ಶಂಕರಗೌಡ ಹಾಗೂ ಸಬ್ ಇನ್ಸ್ಪೆಕ್ಟರ್ ಆನಂದ್ ನಮ್ಮ ಮನೆಗೆ ಬಂದು ಬೇಡಿಕೆ ಇಡುತ್ತಿದ್ದಾರೆ. ಹಣ ಹೊಂದಿಸಲು ಆಗುತ್ತಿಲ್ಲ, ಸ್ವಲ್ಪ ಸಮಯ ಕೊಡಿ ಎಂದು ಕೇಳಿದೆ. ಒಂದೆರೆಡು ವಾರದ ಸಮಯದ ಬಳಿಕವು ಹಣ ಹೊಂದಿಸೋಕೆ ಆಗಿರಲಿಲ್ಲ. ಆಗ ಮತ್ತೆ ಮನೆಗೆ ಬಂದ ಶಂಕರಗೌಡ, ಹಣ ಕೊಡದೆ ಸತಾಯಿಸೋಕೆ ಮುಂದಾಗಿದ್ದೀಯ, ತನಿಖಾಧಿಕಾರಿಗೆ ಎಷ್ಟು ಪ್ರಕರಣದ ತನಿಖೆಯಲ್ಲಿ ಪರಮಾಧಿಕಾರ ಇದೆ ಅಂತಾ ನಿನಗೆ ಗೊತ್ತಿಲ್ಲ. ನೀನು ಹಣ ಕೊಡದೆ ಹೋದರೆ ಮತ್ತೆ ನಿನ್ನ ಮೇಲೆ ಕೇಸ್ ಮಾಡಬೇಕಾಗುತ್ತದೆ ಮತ್ತು ನೀನು ಮತ್ತೆ ಜೈಲು ಪಾಲಾಗಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಶಂಕರಗೌಡ ವಿರುದ್ಧ ಪಾಟೀಲ್ ಆರೋಪ ಮಾಡಿದ್ದಾರೆ.
ನೀವು ಎಷ್ಟೆ ಬ್ಲಾಕ್ಮೇಲೆ ಮಾಡಿದ್ರು ಹಣ ಕೊಡುವುದಕ್ಕೆ ಆಗಲ್ಲ ಅಂತಾ ಹೇಳಿದೆ. ಆಗ ಅವರ ಸಿಬ್ಬಂದಿ ಸಬ್ ಇನ್ಸ್ಪೆಕ್ಟರ್ ಆನಂದ್ರನ್ನು ತಳ್ಳಿ ಓಡಿ ಹೋದೆ ಅಂತಾ ನನ್ನ ಮೇಲೆ ಕೇಸ್ ಮಾಡಿದರು. ಅಷ್ಟೇ ಅಲ್ಲದೆ ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿಗಳ ಎಲ್ಲರ ಬಳಿ ಹಣ ವಸೂಲಿ ಮಾಡಿದ್ದಾರೆ. ಹೀಗಾಗಿ ನಾನು ಸಿಐಡಿ ತನಿಖಾಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದೇನೆ. ಕಲಬುರಗಿ ಪೊಲೀಸ್ ಆಯುಕ್ತರಿಗೆ, ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ದೂರು ನೀಡಿದ್ದೇನೆ. ದೂರಿನ ಜೊತೆಗೆ ನಾನು ಡಿವೈಎಸ್ಪಿ ಶಂಕರಗೌಡ ಮಾತಾಡಿರುವ ಆಡಿಯೋ ಕೂಡ ನೀಡಿದ್ದೇನೆ. ಎಲ್ಲರಿಗೂ ರಿಜಿಸ್ಟರ್ ಪೋಸ್ಟ್ ಮೂಲಕ ದೂರು ಸಲ್ಲಿಸಿರುವ ಪ್ರತಿಯನ್ನು ಕಳುಹಿಸಲಾಗಿದೆ ಎಂದು ಪಾಟೀಲ್ ತಿಳಿಸಿದರು.