ಮಡಿಕೇರಿ: ವಿವಾಹಿತ ಮಹಿಳೆಯ ಅನುಮಾನಾಸ್ಪದ ಸಾವು

ಮಡಿಕೇರಿ: ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಐಮಂಗಲ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿಗಳಾದ ಯೇಸುದಾಸ್ ಹಾಗೂ ತಾರಾ ದಂಪತಿಯ ಪುತ್ರ ರಕ್ಷಿತ್ ಅವರ ಪತ್ನಿ ಕಾವ್ಯಾ (23) ಮೃತಪಟ್ಟವರು.
4 ವರ್ಷಗಳ ಹಿಂದೆ ರಕ್ಷಿತ್ ಹಾಗೂ ಕಾವ್ಯಾ ಪ್ರೇಮ ವಿವಾಹವಾಗಿದ್ದರು ಮತ್ತು ಮಕ್ಕಳಿರಲಿಲ್ಲ ಎಂದು ತಿಳಿದುಬಂದಿದೆ. ಮೃತಳ ತಂದೆ ಆರ್ಜಿ ಗ್ರಾ.ಪಂ. ವ್ಯಾಪ್ತಿಯ ಕಿರುಮಕ್ಕಿ ಗ್ರಾಮದ ನಿವಾಸಿ ವಂಸತ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಾಗಿದೆ.