ಹೊಸ ವರ್ಷಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ವಿಕ್ಕಿ-ಕತ್ರಿನಾ ಮದುವೆ ವಿಡಿಯೋ?

ಹೊಸ ವರ್ಷಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ವಿಕ್ಕಿ-ಕತ್ರಿನಾ ಮದುವೆ ವಿಡಿಯೋ?

ಬಾಲಿವುಡ್ ಸ್ಟಾರ್ ಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹ ಸಮಾರಂಭವು ಗುರುವಾರ ರಾಜಸ್ಥಾನದಲ್ಲಿ ನಡೆದಿದೆ.ರಾಜಸ್ಥಾನದ ಸಿಕ್ಸ್‌ ಸೆನ್ಸಸ್‌ ಕೋಟೆಯಲ್ಲಿ ಅದ್ಧೂರಿ ಮದುವೆ ಕಾರ್ಯಕ್ರಮ ಜರುಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ನೆರವೇರಿದೆ. ಸಂಗೀತ ಕಾರ್ಯಕ್ರಮ, ಮೆಹಂದಿ ಕಾರ್ಯಕ್ರಮ ಎಲ್ಲ ಸೇರಿ ಒಟ್ಟು ಮೂರು ದಿನಗಳ ಕಾಲ ಕೋಟೆಯಲ್ಲಿ ವಿಜೃಂಭಣೆ ಯಾಗಿ ಮದುವೆಯನ್ನು ನೆರವೇರಿಸಲಾಗಿದೆ.

ಮದುವೆ ಮುಹೂರ್ತಕ್ಕೆ ಕತ್ರಿನಾ ಕೈಫ್ ಕಡು ಕೆಂಪು ಬಣ್ಣದ ಲೆಹಂಗಾ ಧರಿಸಿ ಕಂಗೊಳಿಸಿದ್ದರೆ, ವಿಕ್ಕಿ ಕೌಶಲ್‌ ಪಂಜಾಬಿ ಶೈಲಿಯ ಶೆರ್ವಾನಿ ತೊಟ್ಟಿದ್ದರು. ಈ ಮದುವೆಯಲ್ಲಿ ಕುತೂಹಲಕ್ಕೆ ಕಾರಣವಾದ ಮತ್ತೊಂದು ಅಂಶವೆಂದರೆ ಮದುವೆ ವಿಡಿಯೋ ಒಟಿಟಿ ವೇದಿಕೆಯಾದ ಅಮೇಜಾನ್ ಪ್ರೈಮ್ ಗೆ ಮಾರಾಟವಾಗಿದೆ ಎಂಬ ಸುದ್ದಿ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹ ಸಮಾರಂಭದ ವಿಡಿಯೋವನ್ನು ಅಮೇಜಾನ್ ಪ್ರೈಮ್ ಸುಮಾರು 80 ಕೋಟಿ ರೂ. ಬೆಲೆಗೆ ಖರೀದಿಸಿದೆ ಎಂದು ವರದಿಯಾಗಿದೆ. ಅಂದಹಾಗೆ ಹೊಸ ವರ್ಷದ ಸಮಯದಲ್ಲಿ ಈ ವಿಡಿಯೋ ಅಮೇಜಾನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತದೆ ಎನ್ನಲಾಗಿದೆ. 

<blockquote class="twitter-tweet"><p lang="en" dir="ltr">OMAGGSGS AND JUST LIKE THAT, ALMOST 3 YEARS LATER, WE HAVE THEIR FIRST OFFICIAL PICTURE TOGETHER ❤♾