ಕಾಳಿಂಗ ಸರ್ಪದ ಬಾಲ ಹಿಡಿದು ಹುಡುಗಾಟ; ವಿಡಿಯೋಗಾಗಿ ಹುಚ್ಚಾಟಕ್ಕಿಳಿದ ಯುವಕನ ಮೇಲೆ ತಿರುಗಿಬಿತ್ತು ಹಾವು..

ಕಾಳಿಂಗ ಸರ್ಪದ ಬಾಲ ಹಿಡಿದು ಹುಡುಗಾಟ; ವಿಡಿಯೋಗಾಗಿ ಹುಚ್ಚಾಟಕ್ಕಿಳಿದ ಯುವಕನ ಮೇಲೆ ತಿರುಗಿಬಿತ್ತು ಹಾವು..

ಕಾಳಿಂಗ ಸರ್ಪ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲೊಂದು. ಕಿಂಗ್ ಕೋಬ್ರಾವನ್ನು ನೋಡಿದ್ರೆ ಸಾಕು ಜನ ಹೆದರಿ ದೂರ ಓಡ್ತಾರೆ. ಅಂಥದ್ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಬೇಕು ಅನ್ನೋ ಕಾರಣಕ್ಕೆ ಕೆಲವರು ಹಾವಿನೊಂದಿಗೆ ಹುಚ್ಚಾಟ ಮಾಡ್ತಾರೆ. ಇದೀಗ ಅಂಥದ್ದೇ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ.

ಯುವಕನೊಬ್ಬ ಕಾಳಿಂಗ ಸರ್ಪದ ಜೊತೆಗೆ ಹುಡುಗಾಟವಾಡುತ್ತಿರುವ ವಿಡಿಯೋ ಇದು. ಭಾರೀ ಗಾತ್ರದ ಹಾವಿನೊಂದಿಗೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಈತ ಹುಡುಗಾಟವಾಡಲು ಹೋಗಿದ್ದಾನೆ. ಹಾವಿನ ಬಾಲ ಹಿಡಿದುಕೊಂಡು ಎಳೆಯುತ್ತ ಅದು ಹೆಡೆಯೆತ್ತುವಂತೆ ಮಾಡಲು ಕಸರತ್ತು ಮಾಡ್ತಿದ್ದಾನೆ. ಎದುರಿಗಿದ್ದ ವ್ಯಕ್ತಿಯೊಬ್ಬ ಇದನ್ನೆಲ್ಲ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾನೆ. ಯುವಕ ಹಾವಿನ ಜೊತೆಗೆ ಹುಚ್ಚಾಟ ಮಾಡ್ತಿರೋದನ್ನು ನೋಡಲು ಅಲ್ಲಿ ಸಾಕಷ್ಟು ಜನರು ಕೂಡ ನೆರೆದಿದ್ದರು.

ಪದೇ ಪದೇ ಬಾಲ ಹಿಡಿದು ಎಳೆದಿದ್ದರಿಂದ ಕೋಪಗೊಂಡ ಹಾವು ಆತನ ಮೇಲೆ ದಾಳಿ ಮಾಡಲು ಕೂಡ ಯತ್ನಿಸಿದೆ. ಆದ್ರೆ ಅದೃಷ್ಟವಶಾತ್‌ ಯುವಕ ಬಚಾವ್‌ ಆಗಿದ್ದಾನೆ. ಹಾವುಗಳ ಜೊತೆ ಹುಡುಗಾಟ ಆಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಎಷ್ಟೋ ಉದಾಹರಣೆಗಳಿವೆ. ಹಾಗಾಗಿ ಅವುಗಳಿಂದ ದೂರ ಇರುವುದೇ ಒಳಿತು. ಹಾವಿಗೆ ವಿನಾಕಾರಣ ತೊಂದರೆ ಕೊಟ್ಟ ಯುವಕನಿಗೆ ಅನೇಕರು ಛೀಮಾರಿ ಹಾಕಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿರೋ ಈ ವಿಡಿಯೋವನ್ನು ಸುಮಾರು 70 ಸಾವಿರ ಮಂದಿ ವೀಕ್ಷಿಸಿದ್ದಾರೆ.