ಟೀಂ ಇಂಡಿಯಾ ಬ್ಯಾಟಿಂಗ್ ಶೈಲಿ ಬಗ್ಗೆ ಸಬಾ ಕರೀಮ್ ಅಸಮಾಧಾನ

ಟೀಂ ಇಂಡಿಯಾ ಬ್ಯಾಟಿಂಗ್ ಶೈಲಿ ಬಗ್ಗೆ ಸಬಾ ಕರೀಮ್ ಅಸಮಾಧಾನ

ಬಾಂಗ್ಲಾದೇಶದ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ ತಂಡ ಒತ್ತಡಕ್ಕೆ ಸಿಲುಕಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 145 ರನ್‌ಗಳನ್ನು ಬೆನ್ನಟ್ಟಿದ ಟೀಂ ಇಂಡಿಯಾ 3ನೇ ದಿನದ ಅಂತ್ಯಕ್ಕೆ 45 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಂ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನೀತಿಯನ್ನು ಪ್ರಶ್ನಿಸಿದ್ದಾರೆ. ನಿಧಾನಗತಿಯಲ್ಲಿ ರಕ್ಷಣಾತ್ಮಕವಾಗಿ ಆಡುವ ವಿಧಾನವೇ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಅವರು ಹೇಳಿದ್ದಾರೆ.

145 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 45 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಭಾರತೀಯ ಬ್ಯಾಟರ್‌ಗಳು ಅತ್ಯಂತ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. 23 ಓವರ್‌ಗಳಲ್ಲಿ ಪ್ರತಿ ಓವರ್‌ಗೆ ಎರಡಕ್ಕಿಂತ ಕಡಿಮೆ ರನ್ ಗಳಿಸಿದರು. ಭಾರತ ತಂಡ ಬ್ಯಾಟರ್ ಗಳು ಅಷ್ಟೊಂದು ನಿಧಾನಗತಿಯಲ್ಲಿ ಆಡುವ ಅಗತ್ಯವಿರಲಿಲ್ಲ ಎಂದು ಸಬಾಕರೀಂ ಹೇಳಿದ್ದಾರೆ.

"ಬೇಡದ ಕಷ್ಟವನ್ನು ನಾವು ನಮ್ಮ ಮೇಲೆ ಹಾಕಿಕೊಂಡಿದ್ದೇವೆ. ನಮಗೆ ಈ ರೀತಿಯ ಬ್ಯಾಟಿಂಗ್ ವಿಧಾನ ಅಗತ್ಯವಿರಲಿಲ್ಲ. ಶುಭಮನ್ ಗಿಲ್‌ ಸುಲಭವಾಗಿ ರನ್ ಗಳಿಸುವ ಆಟಗಾರ, ಆದರೆ ಇಂದು ಅವರು ಕೂಡ ರಕ್ಷಣಾತ್ಮಕವಾಗಿ ಆಡಲು ಪ್ರಯತ್ನಪಟ್ಟರು, ಅವರು ರನ್ ಗಳಿಸುವ ಆಸಕ್ತಿಯನ್ನು ತೋರಿಸಲಿಲ್ಲ." ಎಂದು ಹೇಳಿದ್ದಾರೆ.