ದೀಪಾವಳಿ ಅಂತಾ ಇಸ್ಪೀಟ್ ಆಡಿದರೆ ಕಾನುನು ಕ್ರಮ
ದೀಪಾವಳಿಯಲ್ಲಿ ಇಸ್ಪೀಟ್ ಆಡುವಂತಿಲ್ಲ. ಇಸ್ಪೀಟ್ ಆಟವಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾವುದು ಎಂದು ಧಾರವಾಡ ವಿದ್ಯಾಗಿರಿ ಪೊಲೀಸರ ಪ್ರಕಟನೆ ಹೊರಡಿಸಿದ್ದಾರೆ. ಧಾರವಾಡದ ಪ್ರಮುಖ ಬೀದಿಗಳಲ್ಲಿ ಧ್ವನಿವರ್ಧಕ ಮೂಲಕ ಜನರಿಗೆ ಇಸ್ಪೀಟು ಆಡಬಾರದು ಎಂದು ಮಾಹಿತಿ ನೀಡಿದ್ರು. ದೀಪಾವಳಿಯಲ್ಲಿ ಇಸ್ಪೀಟ್ ಆಟವಾಡುವುದು ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿದ್ದು, ಇದರಿಂದ ಜನರು ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಇಸ್ಪೀಟ್ ಆಟಕ್ಕೆ ನಿರ್ಬಂಧ ಹೇರಿ ಹಬ್ಬದ ನೆಪದಲ್ಲಿ ಇಸ್ಪೇಟ್ ಆಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.