ನಾಳೆ G20 ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಭಾರತ

ನಾಳೆ G20 ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಭಾರತ

ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಔಪಚಾರಿಕವಾಗಿ ವಹಿಸಿಕೊಳ್ಳಲಿರುವುದರಿಂದ ನಾಳೆ ದೇಶದ 100 ಸ್ಮಾರಕಗಳು ಜಿ20 ಲಾಂಛನದೊಂದಿಗೆ ಝಗಮಗಿಸಲಿವೆ. ಈ ಲೋಗೋ ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಸ್ಫೂರ್ತಿ ಪಡೆದಿದೆ. ಸವಾಲುಗಳ ನಡುವೆ ಬೆಳವಣಿಗೆಯನ್ನು ಪ್ರತಿಬಿಂಬಿಸುವ, ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದ ಏಳುದಳಗಳ ಮೇಲೆ ವಿಶ್ವವನ್ನು ಚಿತ್ರಿಸಿ, ಅದರಲ್ಲಿ G20 ಎಂದು ಇಂಗ್ಲಿಷ್ ನಲ್ಲಿ ಬರೆದಿರುವ ಲೋಗೋ ಇದಾಗಿದೆ. ಜಿ20 ಲೋಗೋದ ಕೆಳಗೆ ದೇವನಾಗರಿ ಲಿಪಿಯಲ್ಲಿ ಭಾರತ್ ಎಂದು ಬರೆಯಲಾಗಿದೆ