ಚಿತ್ರದುರ್ಗ: ಮರಳಿ ಗೂಡು ಸೇರಿದ ಶಬರಿ ಮಲೆಯಲ್ಲಿ ಬಿಟ್ಟ ಪಾರಿವಾಳ

ಚಿತ್ರದುರ್ಗ ಜನವರಿ : ಚಿತ್ರದುರ್ಗದಲ್ಲಿ ಆಶ್ಚರ್ಯಕರ ಸಂಗತಿಯೊಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾ. ಮೇಗಳಹಟ್ಟಿ ಗ್ರಾಮದಲ್ಲಿ ಪಾರಿವಾಳ ಪವಾಡ ಮಾಡಿದೆ. ಶಬರಿ ಮಲೆ ಯಾತ್ರೆಯಲ್ಲಿ ಬಿಟ್ಟ ಪಾರಿವಾಳ ಮರಳಿ ತನ್ನ ಗೂಡಿಗೆ ಸೇರಿದೆ. ಕೇರಳದಲ್ಲಿ ಬಿಟ್ಟ ಮಾಲಾದಾರಿಯ ಪಾರಿವಾಳ ಮರಳಿ ಗೂಡಿಗೆ ಬಂದಿದೆ.
ಕೇರಳ ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ವಿಶ್ವ ವಿಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನದ ಐತಿಹ್ಯಗಳೇ ಸಾಕು ನಮ್ಮನ್ನು ವಿಸ್ಮಯಗೊಳಿಸಲು. ಹೀಗಿರುವಾಗ ಪಾರಿವಾಳ ಅಯ್ಯಪ್ಪನ ಆಶೀರ್ವಾದ ಪಡೆದು ಪುನ: ಆಗಮಿಸಿದೆ ಎಂದು ಹೇಳಲಾಗುತ್ತದೆ.