ಮಂಗಳೂರಲ್ಲಿ ಘೋರ ದುರಂತ: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಬೈದ ತಾಯಿ, ಬಾಲಕ ಆತ್ಮಹತ್ಯೆ

ಮಂಗಳೂರಲ್ಲಿ ಘೋರ ದುರಂತ: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಬೈದ ತಾಯಿ, ಬಾಲಕ ಆತ್ಮಹತ್ಯೆ

ಮಂಗಳೂರು : ನಗರದ ರೆಡ್‌ ಬ್ರಿಕ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ, ಮೊಬೈಲ್‌ ಹೆಚ್ಚು ಬಳಸುತ್ತಿದ್ದ ಮಗನಿಗೆ ತಾಯಿ ಬೈದಿದಕ್ಕೆ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೃತ ಬಾಲಕನನ್ನು ಕೋಟಿಮುರ ರೆಡ್‌ ಬ್ರಿಕ್ಸ್‌ ಅಪಾರ್ಟ್ಮೆಂಟ್‌ ನಿವಾಸಿಗಳಾದ ಜಗದೀಶ್ ಹಾಗೂ ವಿನಯ ದಂಪತಿಯ 9ನೇ ತರಗತಿ ಪುತ್ರ ಜ್ಞಾನೇಶ್‌(14) ಎಂದು ಗುರುತಿಸಲಾಗಿದೆ.ಬಾಲಕ ಅತಿ ಹೆಚ್ಚು ಮೊಬೈಲ್‌ ಬಳಸುತ್ತಿದ್ದು, ಈ ವಿಚಾರವಾಗಿ ತಾಯಿ ಬಾಲಕನನ್ನು ಗದರಿ ಬುದ್ದಿ ಹೇಳಿದ್ದಾರೆ. ತಾಯಿ ಬೈದರೆಂದು ಬೇಸರದಲ್ಲಿದ್ದು ನಂತರ ತಾನು ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋಗಿದ್ದಾನೆ. ತುಂಬಾ ಸಮಯ ಕಳೆದರು ರೂಂನಿಂದ ಮಗ ಬಾರದೇ ಇದ್ದಾಗ ತಂದೆ ಜಗದೀಶ್‌ ಕಿಟಕಿಯ ಮೂಲಕ ರೂಂನೊಳಗೆ ನೋಡಿದಾಗ ಬಾಲಕ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದೆ. ತಕ್ಷಣ ನೇಣು ಬಿಗಿದ ವೇಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದಾಗ ಬಾಲಕ ಮೃತಪಟ್ಟಿರುವುದು ತಿಳಿದುಬಂದಿದೆ.