ಪಿಎಫ್‌ಐ ಕಾರ್ಯಕರ್ತರ ಆಸ್ತಿ ಮುಟ್ಟುಗೋಲಿಗೆ ವಿಳಂಬ; ಕೇರಳ ಹೈಕೋರ್ಟ್ ಗರಂ

ಕೊಚ್ಚಿ: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಹರತಾಳದ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ವಿಳಂಬವಾಗುತ್ತಿರುವುದಕ್ಕೆ ಕೇರಳ ಸರ್ಕಾರವನ್ನು ಹೈಕೋರ್ಟ್ ಟೀಕಿಸಿದೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರಕಾರ 6 ತಿಂಗಳ ಕಾಲಾವಕಾಶ ಕೋರಿರುವುದಕ್ಕೆ ನ್ಯಾಯಾಲಯ ಗರಂ ಆಗಿದೆ. ಕೋಟಿಗಟ್ಟಲೆ ರೂ. ಮೌಲ್ಯದ ಸಾರ್ವಜನಿಕ ಆಸ್ತಿ ನಾಶ ಪ್ರಕರಣದಲ್ಲಿ ಈ ರೀತಿಯ ಸಡಿಲಿಕೆಗೆ ಅವಕಾಶ ನೀಡಬಾರದು ಎಂದು ನ್ಯಾಯಾಲಯ ಸೂಚಿಸಿದೆ