ಸಚಿವ ನಾಗೇಶ

ಸಚಿವ ನಾಗೇಶ

ಉಡುಪಿ,

 ದಸರಾ ಬಳಿಕ 1 ರಿಂದ 5ನೇ ತರಗತಿಗಳನ್ನು ಆರಂಭಿಸೋದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
 ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ಹಾಜರಾತಿ ಕಡ್ಡಾಯಗೊಳಿಸಿಲ್ಲ. ಇದೀಗ ದಸರಾ ಮುಗಿದ ತಕ್ಷಣ 1 ರಿಂದ 5ನೇ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಅವರಿಗೂ ಕಡ್ಡಾಯ‌ ಮಾಡುವುದಿಲ್ಲ ಎಂದರು.
ಶಾಲೆ ಆರಂಭಗೊಂಡರೂ ಆಫ್ ಲೈನ್, ಆನ್ ಲೈನ್ ತರಗತಿಗಳು ನಡೆಯಲಿವೆ. ಗ್ರಾಮೀಣ ಭಾಗದಲ್ಲಿ ಶೇ.90ರಷ್ಟು ಹಾಜರಾತಿ ಇದೆ. ಆನ್ ಲೈನ್ ಕ್ಲಾಸ್ ನಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಕೂಡ ಆಗಿದೆ. ಹೀಗಾಗಿ ದಸರಾ ಮುಗಿದ ತಕ್ಷಣ ಶಾಲೆಗಳು ಆರಂಭಿಸುತ್ತೇವೆ. ಬಿಸಿಯೂಟ ಕೂಡ ಪ್ರಾರಂಭಿಸೋದಾಗಿ ಸಹ ಈ ವೇಳೆ‌ ತಿಳಿಸಿದರು.