ಗೆಲ್ಲುವ ಸಮಯದಲ್ಲಿ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರು ಏಕೆ ನೆನಪು ಬರುವುದಿಲ್ಲ
ಗೆಲ್ಲುವ ಸಮಯದಲ್ಲಿ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರು ಏಕೆ ನೆನಪು ಬರುವುದಿಲ್ಲ. ಅಲ್ಪಸಂಖ್ಯಾತರನ್ನು ಬಲಿಕೊಡುವದೇ ಕುಮಾರಸ್ವಾಮು ಕೆಲಸ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಕೇವಲ ಅಲ್ಪಸಂಖ್ಯಾತರಿಗಷ್ಟೇ ಅಲ್ಲ, ಯಡಿಯೂರಪ್ಪನರವರಿಗೂ ಮೋಸ ಮಾಡಿದ್ದಾರೆ. ಯಡಿಯೂರಪ್ಪನವರಿಗೆ ಅಧಿಕಾರ ಕೊಡಿ ಎಂದು ನಾನು ಕುಮಾರಸ್ವಾಮಿಗೆ ಹೇಳಿದ್ದೆ. ಹೆಚ್.ಡಿ.ರೇವಣ್ಣ ಎಲ್ಲಿ ಉಪ ಮುಖ್ಯಮಂತ್ರಿ ಆಗ್ತಾನೆಂದು ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ. ಇದರ ಬಗ್ಗೆ ನನ್ನ ಬಳಿ ವಿಡಿಯೋ ದಾಖಲೆ ಇದೆ.ಕುಮಾರಸ್ವಾಮಿ ಸ್ವಂತ ಸಹೋದರನ ಏಳಿಗೆಯನ್ನ ಸಹಿಸಿಕೊಳ್ಳುವುದಿಲ್ಲ, ನಮ್ಮ ಏಳಿಗೆಯನ್ನ ಅವರು ಸಹಿಸಿಕೊಳ್ಳುವುದು ದೂರದ ಮಾತು. ಸೋಲುವ ಸಮಯದಲ್ಲಿ ಕುರಿ ಬಲಿ ಕೊಟ್ಟ ಹಾಗೆ, ಅಲ್ಪಸಂಖ್ಯಾತರನ್ನ ಬಲಿ ಕೊಡ್ತಾರೆ ಎಂದು ಕಿಡಿಕಾರಿದರು. ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ತಾರೆ. ಹಾನಗಲ್ನಲ್ಲಿ ಶ್ರೀನಿವಾಸ ಮಾನೆ ಒಳ್ಳೆಯ ಕೆಲಸ ಮಾಡಿದ್ದಾರೆ. ಶ್ರೀನಿವಾಸ ಮಾನೆ ಯಾರೂ ಸಹ ಮಾಡದಷ್ಟು ಕೆಲಸ ಮಾಡಿದ್ದಾರೆ, ಅವರ ಜಯ ನಿಶ್ಚಿತ. ಸಿಎಂ ಉದಾಸಿ ರೈಟ್ ಪರ್ಸನ್, ಆದರೆ, ರಾಂಗ ಪಾರ್ಟಿಯಲ್ಲಿದ್ದರು. ಬಿಜೆಪಿಯಿಂದ ಅವರ ಕುಟುಂಬಕ್ಕೆ ಟಿಕೆಟ್ ಬಿಡಬೇಕಾಗಿತ್ತು. ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡದ ಕಾರಣಕ್ಕೆ ಅವರು ಸೋತು ಬಿಟ್ಟಿದ್ದಾರೆ. ಎರಡೂ ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ.ಬಸವಕಲ್ಯಾಣದಲ್ಲಿ ಜೆಡಿಎಸ್ ನೋಡಿ ಮತ ಹಾಕಿಲ್ಲಾ, ಅಲ್ಲಿನ ವ್ಯಕ್ತಿಯ ನೋಡಿ ಮತ ಹಾಕಿದ್ದಾರೆ. ಇದರಿಂದ ಅಲ್ಲಿ ಬಿಜೆಪಿ ಗೆಲ್ಲಲು ಸಹಾಯವಾಗಿದೆ.ಉಪಚುನಾವಣೆಯಲ್ಲಿ ಸೂಟ್ಕೇಸ್ ರಾಜಕಾರಣ ಮಾಡಿ, ಅಲ್ಪಸಂಖ್ಯಾತರನ್ನ ಬಲಿ ತೆಗೆದುಕೊಂಡಿದ್ದಾರೆ. ಹಾನಗಲ್ನಲ್ಲಿ ಸೂಟ್ಕೇಸ್ ಬರದ ಕಾರಣ ಒಂದೇ ದಿನ ಪ್ರಚಾರ ಮಾಡಿದ್ದಾರೆ. ಸೂಟ್ಕೇಸ್ ಪದ್ದತಿಯ ಬಗ್ಗೆ ನಾನು ಹೇಳ್ತಿಲ್ಲ, ದೇವೇಗೌಡ್ರ ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಕುಮಾರಸ್ವಾಮಿಯವರು ಬಹಳ ಮುಸ್ಲಿಂ ಜನರನ್ನ ಬಲಿ ತೆಗೆದುಕೊಂಡಿದ್ದಾರೆ. ತನ್ವೀರ್ ಶೇಠ್ರನ್ನ ಸೋಲಿಸಿದ್ದೇ ಕುಮಾರಸ್ವಾಮಿ. ಕುಮಾರಸ್ವಾಮಿ ಟಾರ್ಗೆಟ್ ಅಲ್ಪಸಂಖ್ಯಾತರು. ಅಲ್ಪಸಂಖ್ಯಾತರನ್ನ ಮುಗಿಸಿದ್ದು ಸಿದ್ದರಾಮಯ್ಯ ಅಲ್ಲಾ, ಕುಮಾರಸ್ವಾಮಿ ಎಂದರು. ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಒಳ್ಳೆಯ ಯೋಜನೆಗಳನ್ನ ನೀಡಿದ್ದಾರೆ, ಹಲವು ಭಾಗ್ಯಗಳನ್ನ ನೀಡಿದ್ದಾರೆ. ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಏನೂ ನೀಡಲಿಲ್ಲ, ಅದಕ್ಕೆ ನಾನು ಜೆಡಿಎಸ್ ಬಿಟ್ಟು ಬಂದಿದ್ದು. ನನ್ನ ರಾಜಕೀಯ ಗುರುಗಳು ದೇವೇಗೌಡ್ರು ಮತ್ತು ಸಿದ್ದರಾಮಯ್ಯ. ದೇವೇಗೌಡ್ರು 100% ಸೆಕ್ಯೂಲರ್. ಅವರ ಒಂದು ಗುಣವೂ ಕುಮಾರಸ್ವಾಮಿಗೆ ಇಲ್ಲ. ಜಯನಗರ ಬೈ ಎಲೆಕ್ಷನ್ನಲ್ಲಿ ಕುಮಾರಸ್ವಾಮಿ ಜನರಿಗೆ ಯಾರು ಅಂತಾನೇ ಗೊತ್ತೆ ಇರಲಿಲ್ಲ, ನಾನೇ ಮಾಜಿ ಪ್ರಧಾನಿ ಮಂತ್ರಿ ಮಗ ಅಂತ ಪರಿಚಯ ಮಾಡಿಕೊಟ್ಟಿದ್ದು. 2004 ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಉಪಚುನಾವಣೆಯಲ್ಲಿ ಸೂಟ್ಕೇಸ್ ರಾಜಕಾರಣ ಮಾಡಿದ್ದಾರೆ. ನಾನು ಬಸ್ ಮಾಲೀಕ, ನಮ್ಮ ಅಜ್ಜನ ಕಾಲದಿಂದಲೂ ನಾವೂ ಮಾಲೀಕರು. ನಾನು ಯಾವತ್ತೂ ನಮ್ಮ ಬಸ್ ಕ್ಲೀನ್ ಮಾಡಿಲ್ಲ. ಅವರಿಗೆ ಎಲ್ಲಿಯೂ ಕುಳಿತುಕೊಳ್ಳಲು ಜಾಗ ಇರಲಿಲ್ಲ, ನಮ್ಮ ಕಚೇರಿಯಲ್ಲಿ ನಾಲ್ಕು ಗಂಟೆಗಳ ಬಂದು ಕುಳಿತುಕೊಳ್ಳುತ್ತಿದ್ದರು. ಕುಮಾರಸ್ವಾಮಿಯವರನ್ನ ನಾನೇ ಸಾಕಿದ್ದೇನೆ. ಅವರಿಗೆ ನಾನು ಏನು ಕೊಟ್ಟಿದ್ದೇನೆ ಎಂಬುದನ್ನು ಅವರನ್ನೇ ಕೇಳಿ ಹೇಳುತ್ತಾರೆ ಎಂದರು.ಉಪಚುನಾವಣಾ ಪ್ರಚಾರಕ್ಕೆ ಈಶ್ವರಪ್ಪನವರನ್ನು ಯಾರೂ ಪ್ರಚಾರಕ್ಕೆ ಕರೆದಿಲ್ಲ. ಅವರೆ ಬಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಬಂದ್ರೆ ಜನಸಾಗರ ಸೇರುತ್ತಾರೆ.ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತೆ ಇಲ್ಲ. ಆದರೆ ಅದಕ್ಕಾಗಿ ಜಾತಿ ಸಭೆ ಮಾಡುತ್ತಿದ್ದಾರೆ. ಅಚ್ಛೇ ದಿನ್ ಎಲ್ಲಿದೆ? ನೂರು ರೂ.ಗೆ ಲೀಟರ್ ತೈಲ ಬೆಲೆ ದಾಟಿದೆ. 2025ಕ್ಕೆ ದೇಶದಲ್ಲಿ ಕಾಂಗ್ರೆಸ್ ಗೆದ್ದು ರಾಹುಲ್ ಗಾಂಧಿಯವರು ಪ್ರಧಾನಿಯಾಗುತ್ತಾರೆ ಎಂದರು. ಬಿಜೆಪಿ ಅವರ ಆಡಳಿತಕ್ಕೆ ಬೇಸತ್ತ ಜನರು ಕಾಂಗ್ರೆಸ್ ಗೆ ಮತ ಹಾಕುತ್ತಾರೆ ಎಂದರು.