ಬೆಂಗಳೂರಿನಲ್ಲೂ ಸಿಗಲಿದೆ ಇ-ರೂಪಾಯಿ

ನವದೆಹಲಿ: ಹೋಲ್ಸೇಲ್ ಅಥವಾ ಸಗಟು ವಿಭಾಗದ ಪ್ರಾಯೋಗಿಕ ಡಿಜಿಟಲ್ ರೂಪಾಯಿಯನ್ನು ಬಿಡುಗಡೆ ಮಾಡಿದ್ದ RBI ಇಂದು ರಿಟೇಲ್ ಅಥವಾ ಚಿಲ್ಲರೆ ಬಳಕೆಯ ಡಿಜಿಟಲ್ ರೂಪಾಯಿಯನ್ನು ಬಿಡುಗಡೆ ಮಾಡಲಿದೆ. ಬೆಂಗಳೂರು ನವದೆಹಲಿ, ಮುಂಬೈ ಹಾಗೂ ಭುವನೇಶ್ವರಗಳಲ್ಲಿ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಅಸ್ತಿತ್ವಕ್ಕೆ ಬರಲಿದೆ. SBI, ICICI Bank ಸೇರಿದಂತೆ ನಾಲ್ಕು ಬ್ಯಾಂಕ್ಗಳು ಆರಂಭದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ವ್ಯವಹಾರದಲ್ಲಿ ತೊಡಗಿಕೊಳ್ಳಲಿವೆ ಎಂದು ಆರ್ಬಿಐ ತಿಳಿಸಿದೆ.