ಮೂರುಸಾವಿರ ಮಠದ ಆವರಣದಲ್ಲಿ ಬಣ್ಣ ಬಣ್ಣದ ಆಕಾಶಬುಟ್ಟಿ ಹಾರಿಸಿದ ಚಿತ್ರಣ
ಹುಬ್ಬಳ್ಳಿ ಮೂರುಸಾವಿರ ಮಠದ ಆವರಣದಲ್ಲಿ ಬಾನಲ್ಲಿ ಬೆಳಗಿದ ಬಣ್ಣಬಣ್ಣದ ಆಕಾಶಬುಟ್ಟಿಗಳು ಜನರಲ್ಲಿ ಸಂಭ್ರಮ ಮೂಡಿಸಿದವು. ಬುಟ್ಟಿಗಳು ಮೇಲಕ್ಕೆ ಹಾರಿದಷ್ಟೂ ಜನ ಖುಷಿಪಟ್ಟು ಚಿತ್ತದಿಂದ ಆಕಾಶದತ್ತ ಕಣ್ಣು ನೆಟ್ಟರು. ಆಕಾಶಬುಟ್ಟಿ ಹಬ್ಬ ಸಮಿತಿಯು ಎರಡನೇ ಬಾರಿಗೆ ಆಕಾಶಬುಟ್ಟಿ ಹಬ್ಬವನ್ನು ಆಯೋಜಿಸಿತ್ತು. ಇದಕ್ಕಾಗಿ ಸಂಘಟಕರು ಅದ್ಧೂರಿ ತಯಾರಿಯನ್ನೂ ಮಾಡಿಕೊಂಡಿದ್ದರು. ಆದರೆ, ಸಂಜೆಯಿಂದಲೇ ಸುರಿದ ಜಿಟಿಜಿಟಿ ಮಳೆಯಲ್ಲಿ ಸಂಘಟಕರ ಹಾಗೂ ಜನರ ಉತ್ಸಾಹ ಕುಗ್ಗಿಸಿತ್ತು. ಕೆಲಹೊತ್ತು ಮಳೆ ಬಂದರೆ, ಇನ್ನೂ ಕೆಲ ಸಮಯ ಬಿಡುವಿನ ವಾತಾವರಣ. ಆದ್ದರಿಂದ ಮೊದಲು ಬಹಳಷ್ಟು ಜನ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದ್ರೆ ಮಳೆರಾಯ ಕೆಲವು ಸಮಯ ಕಾರ್ಯಕ್ರಮಕ್ಕೆ ಅಡತಡೆ ತಂದಾ.ಇನ್ನು ಈ ಕಾರ್ಯಕ್ರಮವನ್ನು ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಹಬ್ಬ ಉದ್ಘಾಟಿಸಿ ‘ಆಕಾಶಬುಟ್ಟಿ ಹಬ್ಬ ಸಾರ್ವತ್ರಿಕಗೊಳಿಸಿರುವುದು ಒಳ್ಳೆಯ ಕೆಲಸ. ಸಮಾಜ ಇಂಥ ಕೆಲಸಕ್ಕೆ ಪ್ರೋತ್ಸಾಹ ಕೊಡಬೇಕು. ಸಾಂಸ್ಕೃತಿಕ ವಾತಾವರಣ ಉಳಿಸಬೇಕಾಗಿದೆ ಎಂದರು.