ಮೈಸೂರಿನ ಬೆನ್ನಲ್ಲೇ ಬೆಂಗಳೂರಿಗೂ ಕಾಲಿಟ್ಟ ಗುಂಬಜ್ ವಿವಾದ : KPTCL ಕಟ್ಟಡದ ಬಗ್ಗೆ ಹಿಂದೂಪರ ಸಂಘಟನೆಗಳ ಕಿಡಿ

ಬೆಂಗಳೂರು: ಮೈಸೂರು ಇದೀಗ ಈ ಘಟನೆ ಮಾಸುವ ಮುನ್ನವೇ ಕಲಬುರಗಿ, ಬೆಂಗಳೂರಿನಲ್ಲಿ ಮತ್ತೊಂದು ವಿವಾದ ಶುರುವಾಗಿದೆ. ಬೆಂಗಳೂರಿನಲ್ಲೂ ಗುಂಬಜ್ ಪ್ರಕರಣ ಧ್ವನಿ ಎತ್ತಿದೆ. ಮೈಸೂರಿನ ನಂತರ ಬೆಂಗಳೂರಿನಲ್ಲಿ ಇದೀಗ ಗುಂಬಜ್ ಫೈಟ್ ಶುರುವಾಗಿದೆ. ನಗರದ ಸರ್ಕಾರಿ ಕಟ್ಟಡಕ್ಕೆ ಗುಂಬಜ್ ಶೈಲಿ ನೀಡಲಾಗಿದೆ ಎಂಬ ಬಗ್ಗೆ ವಿರೋಧ ಕೇಳಿ ಬಂದಿದೆ. ರೇಸ್ ಕೋರ್ಸ್ ಮುಖ್ಯೆ ರಸ್ತೆಯಲ್ಲಿರುವ ಕೆಪಿಟಿಸಿಎಲ್ ಪವರ್ ಸಪ್ಲೈ ಕಟ್ಟಡದ ಮೇಲೆ ಗುಂಬಜ್ ವಿವಾದ ಹುಟ್ಟಿಕೊಂಡಿದೆ. ನಗರದಲ್ಲಿ ಕೆಪಿಟಿಸಿಎಲ್ ಕಟ್ಟಡಕ್ಕೆ ಗುಂಬಜ್ ಆಕೃತಿಯ ಗುಂಬಜ್ ನಿಲ್ಲಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಬಸ್ ನಿಲ್ದಾಣಗಣನ್ನು ಗುಂಬಜ್ ಮಾದರಿಯಲ್ಲಿ ನಿರ್ಮಾಣ ಮಾಡಿದ್ದಕ್ಕೆ ರಾಜ್ಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟಿಕೊಂಡಿತ್ತು.