ಬಾಗಲಕೋಟೆಯಲ್ಲಿ KSRTC ಬಸ್-‌ ಬೈಕ್‌ ನಡುವೆ ಡಿಕ್ಕಿ: ಇಬ್ಬರು ಸ್ಥಳದಲ್ಲೇ ದುರ್ಮರಣ

ಬಾಗಲಕೋಟೆಯಲ್ಲಿ KSRTC ಬಸ್-‌ ಬೈಕ್‌ ನಡುವೆ ಡಿಕ್ಕಿ: ಇಬ್ಬರು ಸ್ಥಳದಲ್ಲೇ ದುರ್ಮರಣ

ಬಾಗಲಕೋಟೆ: ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮುಧೋಳ ತಾಲೂಕಿನ ಚಿಚಖಂಡಿ ಘಟಪ್ರಭಾ ಸೇತುವೆ ಮೇಲೆ ಕೆಎಸ್‌ ಆರ್‌ ಟಿಸಿ ಬಸ್‌ ಹಾಗೂ ಬೈಕ್‌ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಪಘಾತದ ರಭಸಕ್ಕೆ ಬೈಕ್ ನಜ್ಜುಗುಜ್ಜು ಅಗಿದೆ. ಬೈಕ್ ಮೇಲಿದ್ದ ಇಬ್ಬರೂ ರಕ್ತಸ್ರಾವ ಆಗಿ ಸಾವನ್ನಪ್ಪಿದ್ದಾರೆ.ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲಿದ್ದ ಇಬ್ಬರೂ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೈಕ್ ಲೋಕಾಪುರದಿಂದ ಮುಧೋಳ ಮಾರ್ಗ ಹೊರಟಿತ್ತು. ಇನ್ನು ಬಸ್ ಮುಧೋಳದಿಂದ ಲೋಕಾಪುರ ಕಡೆ ಬರುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ.