ಸಿಎಂ ಬೊಮ್ಮಾಯಿ ಕಂಟ್ರೋಲ್ ನಲ್ಲಿ ಈ ಸರ್ಕಾರವಿಲ್ಲ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಕಂಟ್ರೋಲ್ ನಲ್ಲಿ ಈ ಸರ್ಕಾರವಿಲ್ಲ. ಕೇಶವಕೃಪ ಕಂಟ್ರೋಲ್ನಲ್ಲಿ ಈ ಸರ್ಕಾರ ನಡೆಯುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಯಾಕಂದರೆ ಅವರ ಕಂಟ್ರೋಲ್ ನಲ್ಲಿ ಇದ್ದಿದ್ದರೆ ಅವರು ಸ್ಪಂಧಿಸುತ್ತಿದ್ದರು. ಕ್ಯಾಬಿನೆಟ್ ಸಹ ಸಿಎಂ ಬೊಮ್ಮಾಯಿ ಕಂಟ್ರೋಲ್ನಲ್ಲಿ ಇಲ್ಲ. ಆರ್ಎಸ್ಎಸ್ ಕಂಟ್ರೋಲ್ನಲ್ಲಿ ಎಲ್ಲ ನಡೆಯುತ್ತಿದೆ. ಸುಧಾಕರ್ಗೆ ಸ್ವಲ್ಪವೂ ಮಾನವೀಯತೆ ಇಲ್ಲ. ಈ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿದೆ. ಬಿಮ್ಸ್ ಸಾವು ಪ್ರಕರಣ, ಕೋವಿಡ್ ಪ್ರಕರಣ ಎಲ್ಲ ನಡೆದರೂ ಸುಧಾಕರ ರಾಜೀನಾಮೆ ಕೊಡಬೇಕಿತ್ತು. ಇಂಥವರು ರಾಜೀನಾಮೆ ಕೊಡುತ್ತಾರೆ ಈಗ ಅಂತ ನಿರೀಕ್ಷೆ ಮಾಡಬಹುದಾ? ಮೂರು ವರ್ಷದಲ್ಲಿ ಏನು ನಿಮ್ಮ ಸಾಧನೆ ಎಂದು ವಾಗ್ದಾಳಿ ನಡೆಸಿದ್ದಾರೆ.