ಹರಿಜನ ಕೇರಿ ಸ್ವಚ್ಛಗೊಳಿಸಿದ್ದ ಮಹಾತ್ಮಗಾಂಧೀಜಿ

ಹರಿಜನ ಕೇರಿ ಸ್ವಚ್ಛಗೊಳಿಸಿದ್ದ ಮಹಾತ್ಮಗಾಂಧೀಜಿ

ದಾವಣಗೆರೆ. ಅ.೩; ಸ್ವಾತಂತ್ರಾö್ಯ ಪೂರ್ವದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರö್ಯ ಚಳುವಳಿಯ ಸಂದರ್ಭದಲ್ಲಿ ಯಾವುದೇ ಊರುಗಳಿಗೆ ಹೋದರು ಕೂಡ ಮೊದಲು ಹರಿಜನ ಕೇರಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸಿ, ಸೂರ್ಯ ಉದಯಕ್ಕಿನ ಮುಂಚಿತವಾಗಿ ಹರಿಜನ ಕೇರಿಯ ಮನೆ ಬಾಗಿಲುಗಳ ಮುಂದೆ ಸ್ವಚ್ಛಗೊಳಿಸಿ, ರಂಗೋಲಿ ಹಾಕುತ್ತಿದ್ದರು. ಆದರೆ ಇಂದಿನ ರಾಜಕಾರಣಿಗಳು ಓಟು ತೆಗೆದುಕೊಳ್ಳುವ ಸಂದರ್ಭದಲ್ಲಿ ಹರಿಜನ ಕೇರಿಗೆ ಹೋದವರು ನಂತರ ಚುನಾವಣೆಯಲ್ಲಿ ಮಾತ್ರ ಹರಿಜನರು ನೆನಪಾಗುತ್ತಾರೆ ಎಂದು ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ಹೇಳಿದರು.ಅವರು  ಕೆಟಿಜೆ ನಗರದ 9ನೇ ಕ್ರಾಸ್‌ನಲ್ಲಿರುವ `ಬಿ’ ಕ್ಯಾಂಪ್ ಶಾಲೆಯ ಮುಂಭಾಗದಲ್ಲಿ ಮಹಾತ್ಮಗಾಂಧೀಜಿಯವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮಹಾತ್ಮಗಾಂಧೀಜಿಯವರಿಗೆ ಮಕ್ಕಳೆಂದರೆ ಬಹಳ ಪ್ರೀತಿ ಇದ್ದುದ್ದರಿಂದ  ಮಹಾತ್ಮಗಾಂಧೀಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ. ರವೀಂದ್ರನಾಥ್‌ ನಮ್ಮ ಮನವಿ ಮೇರೆಗೆ ಎರಡು ಶಾಲಾ ಕೊಠಡಿಗಳನ್ನು ಮಂಜೂರು ಮಾಡಿಸಿ ಶಾಲೆಯ ಕಾಮಗಾರಿ ಕೈಗೊಂಡಿರುವುದಕ್ಕೆ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ದ್ಯಾಮನಗೌಡ್ರು, ಸಹ ಶಿಕ್ಷಕರಾದ ಶಿವಮೂರ್ತಿ, ಶ್ರೀಮತಿ ಗಿರಿಜಮ್ಮ, ಶ್ರೀಮತಿ ರ‍್ಹಾನ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಶ್ರೀಮತಿ ಕಮಲಮ್ಮ ಹಾಗೂ ಅಡಿಗೆ ತಯಾರಕರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.