ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಈ ಹಿನ್ನೆಲೆಯಲ್ಲಿ ಕೆಲ ಕಾಲ ವಿಮಾನ ನಿಲ್ದಾಣ ಒಳಗಡೆಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಖಾಕಿ ಹದ್ದಿನ ಕಣ್ಣು ಇಟ್ಟಿದೆ. ವಿಮಾನ ನಿಲ್ದಾಣ ಸುತ್ತಮುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ವೇದಿಕೆ ಮೇಲೆ ತಪಾಸಣೆ ನಡೆಯುತ್ತಿದೆ. ವೇದಿಕೆ ಮತ್ತು ಸುತ್ತಮುತ್ತಲಿನ ಸ್ಥಳದಲ್ಲೇ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸಲಾಗಿತ್ತು.
ಇನ್ನು ನಾರಾಯಣಪುರ ಡ್ಯಾಂನ ಎಡದಂಡೆ ಕಾಲುವೆಗಳ ಸ್ಕಾಡಾ ಗೇಟ್ ಉದ್ಘಾಟನೆ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ. ಹೀಗಾಗಿ ಬುರ್ಖಾ ಧರಿಸಿ ಬರುವವರಿಗೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಹೀಗಾಗಿ ಬುರ್ಖಾ ತಗೆದಿಟ್ಟು ಕಾರ್ಯಕ್ರಮದ ವೇದಿಕೆಯತ್ತ ಮಹಿಳೆಯರು ತೆರಳುತ್ತಿದ್ದಾರೆ. ಬುರ್ಖಾ, ಕಪ್ಪು ವೇಲ್, ಕಪ್ಪು ಬಟ್ಟೆ ಹಾಕಿರುವವರಿಗೆ ನಿರ್ಬಂಧ ಹೇರಲಾಗುತ್ತಿದೆ.