ಗಡಿ ವಿವಾದ ತಂದ ಆಪತ್ತು; ಚುನಾವಣೆಯಿಂದ ಅಭ್ಯರ್ಥಿ ಹೊರಕ್ಕೆ | Doddaballapura |
ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅವಧಿ ಮುಗಿದಿದ್ದು, ಸದಸ್ಯ ಸ್ಥಾನದ ಅಕಾಂಕ್ಷಿಯಾಗಿದ್ದ ಡಿ.ಆರ್.ಧ್ರುವಕುಮಾರ್ ಗಡಿ ಸಮಸ್ಯೆಯಿಂದ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯಲಿದ್ದು, ಕರೇನಹಳ್ಳಿ ವಾರ್ಡ್ ನಂಬರ್-11 ಬಿಸಿಎಂ-ಎ ವರ್ಗಕ್ಕೆ ಮೀಸಲು ಕ್ಷೇತ್ರವಾಗಿದ್ದು, ಕರೇನಹಳ್ಳಿಯ ನಿವಾಸಿ ಡಿ.ಆರ್. ಧ್ರುವಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು, ಆದರೆ ನಗರಸಭೆಯ ಗಡಿ ಸಮಸ್ಯೆಯಿಂದ ಧ್ರುವಕುಮಾರ್ ರವರ ನಾಮಪತ್ರ ತಿರಸ್ಕøತವಾಗಿದೆ. ಇದರಿಂದ ಇವರು ಬೇಸರ ವ್ಯಕ್ತಪಡಿಸಿದ್ದಾರೆ, ದೊಡ್ಡಬಳ್ಳಾಪುರ ನಗರಸಭೆಯ ಎಡವಟ್ಟಿನಿಂದ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆಯಲಾಗಿದೆ, 2007ರಿಂದ ದೊಡ್ಡಬಳ್ಳಾಪುರ ನಗರಸಭೆಗೆ ನಡೆದ ಚುನಾವಣೆಯಲ್ಲಿ, ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ಕಳೆದ ವರ್ಷ 2013ರಲ್ಲಿ ನಡೆದ ನಗರಸಭೆ ಚುನಾವಣೆ ಸೇರಿದಂತೆ 3 ಬಾರಿ ಮತದಾನ ಮಾಡಿರುವೆ. ಆದರೀಗ ಅಧಿಕಾರಿಗಳ ಎಡವಟ್ಟಿನಿಂದ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿರುವುದಾಗಿ ಹೇಳಿದರು.