ಗುಜನಾಳ ಮತಗಟ್ಟೆ ಕೇಂದ್ರಕ್ಕೆ ಸತೀಶ್ ಜಾರಕಿಹೊಳಿ ಭೇಟಿ, ವೀಕ್ಷಣೆ
ವಿಧಾನಪರಿಷತ್ ಚುನಾವಣೆ ಮತದಾನ ಹಿನ್ನೆಲೆ ಗೋಕಾಕ ಮತಕ್ಷೇತ್ರದ ಗುಜನಾಳ ಮತಗಟ್ಟೆ ಕೇಂದ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತದಾನ ಆರಂಭಕ್ಕೂ ಮುನ್ನವೇ ಭೇಟಿ ನೀಡಿ, ವೀಕ್ಷಣೆ ಮಾಡಿದರು. ಸತೀಶ್ ಜಾರಕಿಹೊಳಿ ಗುಜನಾಳ ಏಜೆಂಟ್ ಆಗಿ ಕಾರ್ಯನಿರ್ವಹಿಸುವುದಾಗಿ ಘೋಷಿಸಿದ್ದರು. ಈ ಹಿಂದೆ ವಾಗ್ದಾನ ಮಾಡಿದಂತೆ ಬೆಳಿಗ್ಗೆ 8 ಗಂಟೆಗೆ ಮತಗಟ್ಟೆ ಕೇಂದ್ರದತ್ತ ಆಗಮಿಸಿ ಮತಗಟ್ಟೆ ಸಂಖ್ಯೆ 245 ಭೇಟಿ ನೀಡಿ, ವೀಕ್ಷಿಸಿದರು. ಗುಜನಾಳ ಮತಗಟ್ಟೆ ಕೇಂದ್ರ ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿದೆ. ಇಲ್ಲಿ ಅಕ್ರಮ ಮತದಾನ ನಡೆಯುತ್ತವೆ ಎಂಬ ಮಾತುಗಳು ಕೇಳಿ ಬಂದಿರುವ ಹಿನ್ನೆಲೆ ಸ್ವತಃ ಅವರೇ ಆಗಮಿಸಿದ್ದರು.